ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನ ಐತಿಹಾಸಿಕ ಚಿತ್ರಗಳಿಗೆ ಜನ ಮಾರುಹೋಗುತಿದ್ದು, ಇಲ್ಲಿಯವರೆಗೆ ಬಿಡುಗಡೆಯಾದ ಸ್ಟಾರ್ ನಟರ ಐತಿಹಾಸಿಕ ಚಿತ್ರಗಳನ್ನು ಹಿಂದಿಕ್ಕಿ ಭರ್ಜರಿ ಪ್ರದರ್ಶನಗೊಳ್ಳುತ್ತಿರುವ ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರ ಕೇವಲ ಆರು ದಿನಗಳಲ್ಲಿ 200 ಕೋಟಿ ರೂನ ಕ್ಲಬ್‌ನಲ್ಲಿ ಭರ್ಜರಿ ಚೊಚ್ಚಲ ಪ್ರವೇಶ ಮಾಡಿದೆ.
ಪ್ರೇಮಿಗಳ ದಿನದಂದು ಬಿಡುಗಡೆಯಾದ ಆಕ್ಷನ್ ಚಿತ್ರ ಛಾವಾ 2025 ರ 200 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಮೊದಲ ಬಾಲಿವುಡ್ ಚಿತ್ರವಾಗಿದೆ. ಲಕ್ಷ್ಮಣ್ ಉಟೇಕರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದೂ, ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್ ನ ದಂಗಲ್, ಬಜರಂಗಿ ಭಾಯಿಜಾನ್, ಸಿಂಘಮ್ ಎಗೇನ್, ಮತ್ತು ಪಿಕೆ ಮುಂತಾದ ಬಾಲಿವುಡ್ ಹಿಟ್ ಗಳ ನಂತರ, 200 ಕೋಟಿ ಮೈಲಿಗಲ್ಲನ್ನು ಛಾವಾ ಅನ್‌ಲಾಕ್ ಮಾಡಿದೆ. ಒಟ್ಟಾಗಿ ಆರು ದಿನಗಳಲ್ಲಿ ಭಾರತದಲ್ಲಿ 203.68 ಕೋಟಿ ಗಳಿಸುವಲ್ಲಿ ಛಾವಾ ಯಶಸ್ವಿಯಾಗಿದೆ.