Sunday, January 11, 2026

CINE | ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ: ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟ ‘ಕಾಂತಾರ: ಚಾಪ್ಟರ್ 1’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಗೌರವ ಸಿಕ್ಕಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಆಸ್ಕರ್ ಅವಾರ್ಡ್ ರೇಸ್‌ನಲ್ಲಿ ಸ್ಥಾನ ಪಡೆದಿದೆ. ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಚಿತ್ರವಲ್ಲದಿದ್ದರೂ, ಪ್ರತ್ಯೇಕ ಅರ್ಜಿ ಸಲ್ಲಿಕೆಯ ಮೂಲಕ ‘ಅತ್ಯುತ್ತಮ ಚಿತ್ರ’ ವಿಭಾಗದ ಸ್ಪರ್ಧೆಗೆ ಈ ಸಿನಿಮಾ ಪ್ರವೇಶಿಸಿದೆ. ಹಾಲಿವುಡ್‌ನ ದೊಡ್ಡ ಸಿನಿಮಾಗಳ ಜೊತೆ ರಿಷಬ್ ಶೆಟ್ಟಿ ಅವರ ಚಿತ್ರ ಪೈಪೋಟಿ ನಡೆಸಲಿದೆ ಎಂಬುದೇ ವಿಶೇಷ.

‘ಕಾಂತಾರ’ ಚಿತ್ರದ ಮೂಲಕ ದೇಶಾದ್ಯಂತ ಗುರುತಿಸಿಕೊಂಡ ರಿಷಬ್ ಶೆಟ್ಟಿ, ಅದರ ಪ್ರೀಕ್ವೆಲ್ ಆಗಿರುವ ‘ಕಾಂತಾರ: ಚಾಪ್ಟರ್ 1’ ಅನ್ನು ಭಾರೀ ನಿರೀಕ್ಷೆಗಳ ನಡುವೆ ತೆರೆಗೆ ತಂದಿದ್ದರು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ಗಳಿಕೆ ದಾಖಲಿಸಿದ್ದು, ಬಳಿಕ ಒಟಿಟಿಯಲ್ಲೂ ಬಿಡುಗಡೆಯಾಗಿದೆ.

ಇದನ್ನೂ ಓದಿ: FOOD | ಐದೇ ನಿಮಿಷದಲ್ಲಿ ರೆಡಿ: ನಿಮ್ಮ ಸಂಜೆಯ ಟೀಗೆ ಮಸಾಲ ಸ್ಯಾಂಡ್‌ವಿಚ್ ಸ್ಪೆಷಲ್ ಜೋಡಿ

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಇದೇ ನಿರ್ಮಾಣ ಸಂಸ್ಥೆಯ ‘ಮಹಾವತಾರ ನರಸಿಂಹ’ ಚಿತ್ರವೂ ಸಾಮಾನ್ಯ ಪ್ರವೇಶ ಪಟ್ಟಿಯ ಮೂಲಕ ಆಸ್ಕರ್ ರೇಸ್‌ನಲ್ಲಿ ಸ್ಥಾನ ಪಡೆದಿದೆ. ಹಲವು ಹಂತಗಳ ಸ್ಪರ್ಧೆಯ ಬಳಿಕ ಈ ಚಿತ್ರಗಳಲ್ಲಿ ಯಾವುದಾದರೂ ಅಂತಿಮ ಪಟ್ಟಿಗೆ ತಲುಪುತ್ತದೆಯೇ ಎಂಬುದರ ಬಗ್ಗೆ ಸಿನಿ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

error: Content is protected !!