April 9, 2026
Thursday, April 9, 2026
spot_img

CINE | ‘ಧುರಂಧರ್ 2’ಗೆ ಮತ್ತೊಂದು ಸಂಕಷ್ಟ: ‘ರಂಗ್ ದೇ ಲಾಲ್’ ಹಾಡಿಗೆ ಶುರುವಾಗಿದೆ ‘ಡಿಲೀಟ್ ಭಯ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಡುಗಡೆಯಾಗಿ ತಿಂಗಳು ಕಳೆದಿರುವ ‘ಧುರಂಧರ್ 2’ ಸಿನಿಮಾಗೆ ಈಗ ಮತ್ತೊಂದು ವಿವಾದ ಎದುರಾಗಿದೆ. ಕಥೆ ಕಳವು ಆರೋಪದ ಚರ್ಚೆ ತಣ್ಣಗಾಗುವ ಮುನ್ನವೇ, ಚಿತ್ರದ ಹಾಡೊಂದರ ಮೇಲೆ ಹಕ್ಕು ವಿವಾದ ತಲೆದೋರಿದ್ದು ಚಿತ್ರತಂಡಕ್ಕೆ ಹೊಸ ತಲೆನೋವಾಗಿಸಿದೆ.

ಆದಿತ್ಯ ಧಾರ್ ನಿರ್ದೇಶನದಲ್ಲಿ ಜಿಯೋ ಸ್ಟುಡಿಯೋ ನಿರ್ಮಿಸಿರುವ ಈ ಸಿನಿಮಾದಲ್ಲಿ ಬಳಕೆಯಾದ ‘ರಂಗ್ ದೇ ಲಾಲ್’ ಹಾಡು ಈಗ ಕಾನೂನು ವಿವಾದಕ್ಕೆ ಕಾರಣವಾಗಿದೆ. ಈ ಗೀತೆ ಹಳೆಯ ‘ತ್ರಿದೇವ್’ ಚಿತ್ರದ ಮೂಲ ಹಾಡಿಗೆ ಹೋಲಿಕೆಯಾಗಿದ್ದು, ಸರಿಯಾದ ಅನುಮತಿ ಪಡೆಯದೆ ಬಳಸಲಾಗಿದೆ ಎಂದು ತ್ರಿಮೂರ್ತಿ ಫಿಲ್ಮ್ಸ್ ಆರೋಪಿಸಿದೆ.

ಇದನ್ನೂ ಓದಿ:

ಚಿತ್ರತಂಡದಿಂದ ಯಾವುದೇ ಅಧಿಕೃತ ಒಪ್ಪಂದವಿಲ್ಲದೆ ಹಾಡನ್ನು ಬಳಸಲಾಗಿದೆ ಎಂದು ಕಂಪನಿ ಕೋರ್ಟ್ ಮೆಟ್ಟಿಲೇರಿದ್ದು, ತಕ್ಷಣ ಈ ಹಾಡಿನ ಬಳಕೆಯನ್ನು ನಿಲ್ಲಿಸಲು ಆದೇಶ ನೀಡುವಂತೆ ಮನವಿ ಮಾಡಿದೆ. ಜೊತೆಗೆ ಹಕ್ಕು ಉಲ್ಲಂಘನೆ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ಪರಿಹಾರ ಹಣವೂ ಕೇಳಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಒಂದು ವೇಳೆ ನ್ಯಾಯಾಲಯ ತ್ರಿಮೂರ್ತಿ ಫಿಲ್ಮ್ಸ್ ಪರ ತೀರ್ಪು ನೀಡಿದರೆ, ಹಾಡನ್ನು ಚಿತ್ರದಿಂದ ತೆಗೆದುಹಾಕಬೇಕಾದ ಪರಿಸ್ಥಿತಿ ಉಂಟಾಗಬಹುದು. ಇದು ಚಿತ್ರಕ್ಕೆ ಆರ್ಥಿಕ ನಷ್ಟ ಮಾತ್ರವಲ್ಲದೆ, ಪ್ರತಿಷ್ಠೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದಕ್ಕೂ ಮೊದಲು ಚಿತ್ರದ ಕಥೆ ಕುರಿತ ಆರೋಪವನ್ನು ನಿರ್ದೇಶಕ ಆದಿತ್ಯ ಧಾರ್ ತಳ್ಳಿಹಾಕಿದ್ದರು. ಇದೀಗ ಹಾಡಿನ ವಿವಾದಕ್ಕೆ ಚಿತ್ರತಂಡ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !