September 30, 2026
Wednesday, September 30, 2026
spot_img

FOOD | ಮಂಗಳೂರಿನ ‘OG’ ರೆಸಿಪಿ ಈ ಗೇರುಬೀಜ ತೊಂಡೆಕಾಯಿ ಪಲ್ಯ: ನೀವೂ ಟ್ರೈ ಮಾಡಿ

ಮಧ್ಯಾಹ್ನದ ಊಟಕ್ಕೆ ಅನ್ನ, ಸಾರು ಅಥವಾ ರಸಂ ಜೊತೆ ಸವಿಯಲು ಒಂದು ಸ್ಪೆಷಲ್ ಪಲ್ಯ ಬೇಕಲ್ವಾ? ಹಾಗಿದ್ರೆ ಈ ಮಂಗಳೂರು ಶೈಲಿಯ ಗೇರುಬೀಜ ತೊಂಡೆಕಾಯಿ ಪಲ್ಯ ಟ್ರೈ ಮಾಡಿ. ಈ ಪಲ್ಯ ಬಿಸಿ ಅನ್ನ, ಚಪಾತಿ ಎರಡಕ್ಕೂ ಚೆನ್ನಾಗಿ ಹೊಂದುತ್ತದೆ.

ಬೇಕಾಗುವ ಸಾಮಗ್ರಿಗಳು

ತೊಂಡೆಕಾಯಿ – 250 ಗ್ರಾಂ
ಗೇರುಬೀಜ – 150 ಗ್ರಾಂ
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ)
ಹಸಿ ಮೆಣಸಿನಕಾಯಿ – 2
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಕರಿಬೇವು – ಸ್ವಲ್ಪ
ಅರಿಶಿನ – 1/4 ಚಮಚ
ಮೆಣಸಿನ ಪುಡಿ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ತುರಿದ ತೆಂಗಿನಕಾಯಿ – 2 ಚಮಚ

ಮಾಡುವ ವಿಧಾನ

ಮೊದಲು ತೊಂಡೆಕಾಯಿಯನ್ನು ತೊಳೆದು ಸಣ್ಣ ಉದ್ದ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ನಂತರ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.

ಇದಕ್ಕೆ ತೊಂಡೆಕಾಯಿ ಸೇರಿಸಿ ಅರಿಶಿನ, ಉಪ್ಪು ಹಾಕಿ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಅರ್ಧ ಬೇಯಿದ ನಂತರ ಗೇರುಬೀಜ ಸೇರಿಸಿ ಮತ್ತೊಮ್ಮೆ ಸ್ವಲ್ಪ ಬೇಯಿಸಿ. ಕೊನೆಯಲ್ಲಿ ಮೆಣಸಿನ ಪುಡಿ ಮತ್ತು ತುರಿದ ತೆಂಗಿನಕಾಯಿ ಸೇರಿಸಿ 2 ನಿಮಿಷ ಹುರಿದರೆ ರುಚಿಯಾದ ಪಲ್ಯ ಸಿದ್ಧ.

ಬಿಸಿ ಅನ್ನದ ಜೊತೆ ತುಪ್ಪ ಹಾಕಿ ಸವಿದರೆ ಮಧ್ಯಾಹ್ನದ ಊಟಕ್ಕೆ ಮಜಾ ಹೆಚ್ಚುತ್ತದೆ!

Must Read