CINE | 11 ವರ್ಷದ ಬಳಿಕ ಡೈರೆಕ್ಷನ್ ಗೆ ಅಂತಾರೆ ಎಂಟ್ರಿ! ಗೋಲ್ಡನ್ ಸ್ಟಾರ್ ಜೊತೆ ಮಾಡ್ತಿದ್ದಾರೆ ಹೊಸ ಸಿನಿಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡೈರೆಕ್ಟರ್ ಅರಸು ಅಂತಾರೆ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯ ಹೊಸ ಸಿನಿಮಾವೊಂದು ಇತ್ತೀಚೆಗಷ್ಟೇ ಸೆಟ್ಟೇರಿದೆ. ಈ ಚಿತ್ರದ ಚಿತ್ರೀಕರಣ ಭರದಿಂದಲೇ ಸಾಗಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ.

ಎರಡನೇ ಹಂತದ ಚಿತ್ರೀಕರಣಕ್ಕೆ ರೆಡಿ ಆಗುತ್ತಿರುವ ಅಂತಾರೆ ಟೀಮ್, ಈ ಒಂದು ಖುಷಿಯನ್ನ ಈಗ ಮಾಧ್ಯಮಗಳಿಗೂ ಹಂಚಿಕೊಂಡಿದ್ದಾರೆ. ಡೈರೆಕ್ಟರ್ ಅರಸು ಅಂತಾರೆ ಹೆಚ್ಚು ಕಡಿಮೆ 11 ವರ್ಷದ ಬಳಿಕ ಮತ್ತೆ ಈ ಚಿತ್ರಕ್ಕೆ ಡೈರೆಕ್ಷನ್ ಮಾಡಿದ್ದಾರೆ.

ಈ ಚಿತ್ರಕ್ಕೆ ಸದ್ಯ ಪ್ರೊಡಕ್ಷನ್ ನಂಬರ್-1 ಅಂತಲೇ ಹೆಸರು ಇಟ್ಟಿದ್ದಾರೆ. ಈ ಮೂಲಕ ಚಿತ್ರಕ್ಕೆ ಏನು ಹೆಸರಿಡುತ್ತಾರೆ ಅನ್ನುವ ಕುತೂಹಲವೂ ಇದೆ. ಇದರ ಜೊತೆಗೆ ಈ ಮೊದಲ ಹಂತದ ಚಿತ್ರೀಕರಣದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಾಯಕಿ ಅಮೃತಾ ಅಯ್ಯರ್, ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಚ್‌ ಸುಧೀ ಪಾತ್ರಗಳ ಚಿತ್ರೀಕರಣ ನಡೆದಿದೆ.

ಬೆಂಗಳೂರಿನಲ್ಲಿಯೇ ಚಿತ್ರದ ಮೊದಲ ಹಂತದ ಶೂಟಿಂಗ್ ಅನ್ನು ಮುಗಿಸಿದ್ದು, ಬಹು ವೆಚ್ಚದಲ್ಲಿಯೇ ನಿರ್ಮಾಣಗೊಳ್ಳುತ್ತಿರೋ ಈ ಚಿತ್ರದ ಎರಡನೇ ಹಂತದ ಶೂಟಿಂಗ್ ಕೂಡ ಅತೀ ಶೀಘ್ರದಲ್ಲಿಯೇ ಶುರು ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here