CINE | ಸೋನು ನಿಗಮ್‌ನ ಬ್ಯಾನ್ ಮಾಡಿದ್ರೆ KFIಗೆ ನಷ್ಟ: ನಟಿ ಸ್ಟೇಟ್ಮೆಂಟ್ ಗೆ ನೆಟ್ಟಿಗರು ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಹಾಡಿನ ಬೇಡಿಕೆ ಇಟ್ಟಿದ್ದಕ್ಕೆ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟ ಸೋನು ನಿಗಮ್‌ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿದ್ದು, ಇದರ ಬೆನ್ನಲ್ಲೇ ಇನ್ಸ್ಟಾ ಗ್ರಾಂನಲ್ಲಿ Sorry Karnataka ನಿಮ್ಮ ಮೇಲಿರುವ ನನ್ನ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದು. ನಿಮ್ಮನ್ನ ಸದಾ ಪ್ರೀತಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ಗೆ ‘ಗಿಣಿರಾಮ’ ನಟಿ ನಯನ ನಾಗರಾಜ್‌ ಮಾಡಿರುವ ಕಾಮೆಂಟ್‌ ಇದೀಗ ಕನ್ನಡಗರಲ್ಲಿ ಬೇಸರ ಮೂಡಿಸಿದೆ.

ನಟಿ ನಯನ ನಾಗರಾಜ್‌, ‘’ಲವ್ ಯು.. ನಿಮ್ಮನ್ನು ಬ್ಯಾನ್ ಮಾಡಿದರೆ ಅದು ಕೆಎಫ್‌ಐಗೆ ನಷ್ಟ’’ ಎಂದು ಕಾಮೆಂಟ್ ಮಾಡಿದ್ದಾರೆ. ನಯನ ನಾಗರಾಜ್‌ ಮಾಡಿರುವ ಕಾಮೆಂಟ್‌ಗೆ ಅನೇಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಒಬ್ಬರು ಕರ್ನಾಟಕದಲ್ಲೇ ಒಳ್ಳೆ ಒಳ್ಳೆ ಸಿಂಗರ್ ಇದ್ದಾರೆ ಬಿಡಿ. ನೋಡ್ಕೊಂಡು ಸಪೋರ್ಟ್ ಮಾಡಿ ನಯನ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕನ್ನಡ ಚಿತ್ರೋದ್ಯಮದಲ್ಲಿ ಹಲವಾರು ಕಲಾವಿದರಿಂದ ಸಮೃದ್ಧವಾಗಿದೆ. ಯಾರೋ ಒಬ್ಬರಿಂದ ನಮ್ಮ ಇಂಡಸ್ಟ್ರೀ ಹಾಳಾಗುವುದಿಲ್ಲ ಎಂದು ಕಮೆಂಟ್‌ ಮಾಡಿದ್ದಾರೆ. ನಯನ ಹೇಳಿಕೆಯಿಂದ ನೆಟ್ಟಿಗರಂತೂ ಫುಲ್ ಗರಂ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!