ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ಕಳೆದಿವೆ. ಇದರ ನೆನಪಿಗಾಗಿ ಶ್ರೀರಂಗಪಟ್ಟಣದಲ್ಲಿ “ಬೆಳ್ಳಿ ಪರ್ವ ಡಿ 25” ಎಂಬ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕನ್ನಡ ಚಿತ್ರರಂಗದ ಅನೇಕ ದೊಡ್ಡ ನಟರು, ನಟಿಯರು ಭಾಗವಹಿಸುವ ಮೂಲಕ ಪ್ರಸ್ತುತ ದೊಡ್ಡ ಅಭಿಮಾನಿಗಳ ಹಬ್ಬ ನಡೆಯುತ್ತಿದೆ. ಸುಮಲತಾ ಅಂಬರೀಶ್, ಧನಂಜಯ್, ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ನೀನಾಸಂ ಸತೀಶ್, ಅಭಿಷೇಕ್, ಧನ್ವೀರ್, ಚಿಕ್ಕಣ್ಣ, ವಿನೋದ್ ರಾಜ್, ಪ್ರೇಮ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಸುತ್ತೂರು ಮಠ ಶ್ರೀ, ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಮುನ್ನ ಅಭಿಮಾನಿಗಳಿಗೆ ಮನವಿ ಮಾಡಿದ ನಟ ದರ್ಶನ್, ಯಾವುದೇ ಕಾರಣಕ್ಕೂ ಮಾತಾಡಬಾರದು ಎಂದರು.
ದಯಮಾಡಿ ಸುಮ್ಮನಿರಿ, ಕಿರುಚಬಾರದು. ದೇವರ ಸಮಾನ ಗುರುಗಳು ಮಾತನಾಡುತ್ತಾರೆ. ಎಲ್ಲರೂ ಸುಮ್ಮನಿದ್ದು ಕೇಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.