February 9, 2026
Monday, February 9, 2026
spot_img

CINE | ಬಾಕ್ಸ್ ಆಫೀಸ್‌ನಲ್ಲಿ ‘ಬಾರ್ಡರ್ 2’ ಘರ್ಜನೆ: 300 ಕೋಟಿ ಕ್ಲಬ್‌ಗೆ ಮತ್ತೊಮ್ಮೆ ಎಂಟ್ರಿ ಕೊಟ್ಟ ಸನ್ನಿ ಡಿಯೋಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಡುಗಡೆಯಾದ ದಿನದಿಂದಲೇ ಪ್ರೇಕ್ಷಕರ ಗಮನ ಸೆಳೆದ ‘ಬಾರ್ಡರ್ 2’ ಸಿನಿಮಾ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡುತ್ತಾ ಮುನ್ನಡೆಯುತ್ತಿದೆ. ಮೂರನೇ ವಾರಾಂತ್ಯ ಮುಗಿಯುವಷ್ಟರಲ್ಲಿ ಈ ಚಿತ್ರ 300 ಕೋಟಿ ಕ್ಲಬ್ ಸೇರುವ ಮೂಲಕ ಸನ್ನಿ ಡಿಯೋಲ್ ಅವರ ಕರಿಯರ್‌ನಲ್ಲಿ ಮತ್ತೊಂದು ದೊಡ್ಡ ದಾಖಲೆಯನ್ನು ನಿರ್ಮಿಸಿದೆ.

ಅನುರಾಗ್ ಸಿಂಗ್ ನಿರ್ದೇಶನದ ಈ ಯುದ್ಧ ಕಥೆಯ ಸಿನಿಮಾ, ಮೂರನೇ ಭಾನುವಾರ 6.90 ಕೋಟಿ ರೂ. ಸಂಗ್ರಹಿಸುವ ಮೂಲಕ ಒಟ್ಟು 17 ದಿನಗಳಲ್ಲಿ 309.4 ಕೋಟಿ ರೂ. ಗಳಿಕೆ ತಲುಪಿದೆ. ಮೊದಲ ವಾರದಲ್ಲೇ 224 ಕೋಟಿ ರೂ. ಗಳಿಸಿದ್ದ ಚಿತ್ರ, ಎರಡನೇ ವಾರದಲ್ಲಿ ಸ್ವಲ್ಪ ಕುಸಿತ ಕಂಡರೂ ಉತ್ತಮ ಪ್ರದರ್ಶನ ಮುಂದುವರಿಸಿದೆ. ಮೂರನೇ ವಾರಾಂತ್ಯದಲ್ಲಿ ಕೂಡ ಸುಮಾರು 15 ಕೋಟಿ ರೂ. ಸೇರ್ಪಡೆಗೊಂಡಿದೆ.

ಇದನ್ನೂ ಓದಿ:

ಈ ಸಿನಿಮಾದ ಮೂಲಕ ವರುಣ್ ಧವನ್ ಮೊದಲ ಬಾರಿಗೆ 300 ಕೋಟಿ ಕ್ಲಬ್ ತಲುಪಿದ ಚಿತ್ರವನ್ನು ಪಡೆದಿದ್ದಾರೆ. ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದು ಚಿತ್ರದ ಮತ್ತೊಂದು ವಿಶೇಷ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !