March 26, 2026
Thursday, March 26, 2026
spot_img

CINE | ದೇವರ ಹೆಸರಿನ ಸಿನಿಮಾಗಳಿಗೆ ಸೆನ್ಸಾರ್ ಅಡ್ಡಿ? ಶೀರ್ಷಿಕೆ ಬದಲಾವಣೆಯ ಅಘೋಷಿತ ನಿಯಮ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ದೇವರ ಹೆಸರುಗಳನ್ನು ವ್ಯಕ್ತಿಗಳಿಗೆ, ಅಂಗಡಿಗಳಿಗೆ ಅಥವಾ ವಿವಿಧ ಸಂಸ್ಥೆಗಳಿಗೆ ಇಡುವುದು ಸಾಮಾನ್ಯ ಸಂಗತಿ. ದೇವರ ಹೆಸರಿದ್ದರೆ ಶುಭವಾಗುತ್ತದೆ ಎಂಬ ನಂಬಿಕೆ ಕೂಡ ಹಲವರಲ್ಲಿ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ದೇವರ ಹೆಸರನ್ನು ಬಳಸುವ ವಿಚಾರದಲ್ಲಿ ಸೆನ್ಸಾರ್ ಮಂಡಳಿ ಕಠಿಣ ನಿಲುವು ತಾಳುತ್ತಿದೆ ಎಂಬ ಚರ್ಚೆ ಶುರುವಾಗಿದೆ.

ನಟಿ ವರಲಕ್ಷ್ಮಿ ಶರತ್ ಕುಮಾರ್ ಅಭಿನಯದ ‘ಸರಸ್ವತಿ’ ಸಿನಿಮಾಗೆ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಚಿತ್ರಕ್ಕೆ ಮೂಲವಾಗಿ ‘ಸರಸ್ವತಿ’ ಎಂಬ ಹೆಸರಿಡಲಾಗಿದ್ದರೂ, ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು ಶೀರ್ಷಿಕೆಯನ್ನು ‘ಎಸ್. ಸರಸ್ವತಿ’ ಎಂದು ಬದಲಾಯಿಸಲು ಸೂಚಿಸಿದೆ. ಈ ಸಿನಿಮಾ ದೇವಿಯ ಕುರಿತ ಕಥೆಯಲ್ಲ; ಸರಸ್ವತಿ ಎಂಬ ಹೆಸರಿನ ಸಾಮಾನ್ಯ ಮಹಿಳೆಯ ಜೀವನಕಥೆಯನ್ನೇ ಆಧರಿಸಿದೆ ಎಂಬುದು ಚಿತ್ರತಂಡದ ಮಾತು.

ಇದನ್ನೂ ಓದಿ:

ಇದಕ್ಕೂ ಮೊದಲು ಬಿಡುಗಡೆಯಾದ ‘ಹೇ ಭಗವಾನ್’ ಎಂಬ ಸಿನಿಮಾದ ಶೀರ್ಷಿಕೆಯಲ್ಲಿ ಸಹ ಇದೇ ರೀತಿಯ ಬದಲಾವಣೆ ಮಾಡಲಾಗಿತ್ತು. ಸೆನ್ಸಾರ್ ಮಂಡಳಿಯ ಸೂಚನೆಯಂತೆ ಚಿತ್ರದ ಹೆಸರನ್ನು ‘ಹೇ ಭಗವಂತ್’ ಎಂದು ಪರಿವರ್ತಿಸಿ ಬಿಡುಗಡೆ ಮಾಡಲಾಗಿತ್ತು.

ಇತ್ತ ಕೆಲವರು ಸೆನ್ಸಾರ್ ಮಂಡಳಿ ಧಾರ್ಮಿಕ ವಿಷಯಗಳಲ್ಲಿ ಅತಿಯಾದ ಜಾಗ್ರತೆ ತೋರಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಧರ್ಮ, ರಾಜಕೀಯ ಅಥವಾ ಸಾಮಾಜಿಕ ವಿಚಾರಗಳನ್ನು ಪ್ರಶ್ನಿಸುವ ಸಿನಿಮಾಗಳಿಗೆ ಹೆಚ್ಚಾಗಿ ಅಡಚಣೆ ಎದುರಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇತ್ತೀಚೆಗೆ ಕೆಲವು ದೊಡ್ಡ ಚಿತ್ರಗಳ ಶೀರ್ಷಿಕೆಗಳ ಮೇಲೂ ಇದೇ ರೀತಿಯ ವಿವಾದಗಳು ಹುಟ್ಟಿಕೊಂಡಿರುವುದು ಗಮನಾರ್ಹವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !