April 5, 2026
Sunday, April 5, 2026
spot_img

CINE | ಮೂರನೇ ವಾರದಲ್ಲೂ ತಗ್ಗದ ಕ್ರೇಜ್: ‘ಹಮ್ಜಾ’ ಅಬ್ಬರಕ್ಕೆ ನಡುಗಿದ ಬಾಕ್ಸ್ ಆಫೀಸ್ ಗಲ್ಲಾಪೆಟ್ಟಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಎನರ್ಜಿಟಿಕ್ ನಟ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್ 2’ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾಗಿ ಮೂರು ವಾರಗಳೇ ಕಳೆದಿದ್ದರೂ, ಈ ಚಿತ್ರದ ಕಲೆಕ್ಷನ್ ವೇಗ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರವು ಭಾರತದ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂಪಾಯಿ ಗಳಿಕೆಯತ್ತ ದಾಪುಗಾಲು ಹಾಕುತ್ತಿದೆ.

ಸ್ಯಾಕ್ನಿಲ್ಕ್ ವರದಿಯಂತೆ, ಚಿತ್ರವು ಇದುವರೆಗೆ ಬರೋಬ್ಬರಿ 985 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶೇಷವೆಂದರೆ, ಮೂರನೇ ವಾರಾಂತ್ಯದಲ್ಲೂ ಚಿತ್ರದ ಕಲೆಕ್ಷನ್ ಪುಟಿದೆದ್ದಿದ್ದು, ಶನಿವಾರ ಒಂದೇ ದಿನ 25.65 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಈ ಚಿತ್ರವು ಭಾರತದ ಬ್ಲಾಕ್‌ಬಸ್ಟರ್ ಸಿನಿಮಾಗಳಾದ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ (859.70 ಕೋಟಿ), ರಾಜಮೌಳಿ ಅವರ ‘ಆರ್​ಆರ್​ಆರ್​’ (782.20 ಕೋಟಿ) ಮತ್ತು ಪ್ರಭಾಸ್ ಅವರ ‘ಕಲ್ಕಿ 2898 ಎಡಿ’ (646 ಕೋಟಿ) ದಾಖಲೆಗಳನ್ನು ಸುಲಭವಾಗಿ ಹಿಂದಿಕ್ಕಿದೆ.

ಸದ್ಯಕ್ಕೆ ‘ಧುರಂಧರ್ 2’ ಕಣ್ಣು ಭಾರತದ ಸಾರ್ವಕಾಲಿಕ ದಾಖಲೆಗಳ ಮೇಲಿದೆ. ಈಗಾಗಲೆ ‘ಬಾಹುಬಲಿ 2’ (1,030 ಕೋಟಿ) ಮತ್ತು ಇತ್ತೀಚಿನ ಸೆನ್ಸೇಷನ್ ‘ಪುಷ್ಪ 2’ (1,234.10 ಕೋಟಿ) ಸಿನಿಮಾಗಳ ದಾಖಲೆಯ ಸಮೀಪಕ್ಕೆ ರಣವೀರ್ ಸಿನಿಮಾ ತಲುಪಿದೆ. ಈ ಮೈಲಿಗಲ್ಲನ್ನು ದಾಟುತ್ತಾ ಎಂಬುದೇ ಈಗ ಕುತೂಹಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !