March 23, 2026
Monday, March 23, 2026
spot_img

CINE | ‘ಟಾಕ್ಸಿಕ್’ನ ತಬಾಹಿ ಪೋಸ್ಟರ್ ಗೆ ಟೀಕೆ: ನಾಯಕಿ ಮುಖ ರಿವೀಲ್ ಮಾಡಿದ ಚಿತ್ರತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವ ನಡುವೆಯೇ ಮೊದಲ ಹಾಡಿನ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಮಾರ್ಚ್ 2ರಂದು ಮಧ್ಯಾಹ್ನ 12 ಗಂಟೆ 59 ನಿಮಿಷಕ್ಕೆ ‘ತಬಾಹಿ’ ಹಾಡು ಹೊರಬರಲಿದೆ ಎಂದು ತಿಳಿಸಲಾಗಿದೆ. ಈ ವಿಷಯ ತಿಳಿಸಲು ಮೊದಲು ಬಿಡುಗಡೆಗೊಂಡ ಪೋಸ್ಟರ್ ನಲ್ಲಿ ಯಶ್ ಮುಖ ಮಾತ್ರ ತೋರಿಸಲಾಗಿತ್ತು. ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಟೀಕೆಗಳ ನಂತರ ಚಿತ್ರತಂಡ ಮತ್ತೊಂದು ಪೋಸ್ಟರ್ ಹೊರಹಾಕಿದೆ. ಅದರಲ್ಲಿ ನಾಯಕಿ ಕಿಯಾರಾ ಅಡ್ವಾಣಿ ಅವರ ಮುಖವೂ ಕಾಣಿಸಿಕೊಂಡಿದೆ. ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಸೇರಿದಂತೆ ಹಲವು ನಟಿಯರು ಅಭಿನಯಿಸಿದ್ದಾರೆ.

ಇದನ್ನೂ ಓದಿ:

ಈ ಚಿತ್ರಕ್ಕೆ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದು, ಕನ್ನಡ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !