April 11, 2026
Saturday, April 11, 2026
spot_img

ಹಿಮಾಚಲ ಪ್ರದೇಶದ ಹೊಲದಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ: ಸ್ಥಳಕ್ಕೆ ಪೊಲೀಸರು ದೌಡು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದ ಗ್ರಾಮಯೊಂದರ ಹೊಲದಲ್ಲಿ ಪಾಕಿಸ್ತಾನದ ಗುರುತು ಹೊಂದಿರುವ ಅನುಮಾನಾಸ್ಪದ ಬಲೂನ್ ಪತ್ತೆಯಾಗಿದೆ.

ಇಲ್ಲಿನ ಸಿರ್ಮೌರ್ ಜಿಲ್ಲೆಯ ಬಖೋಗ್ ಗ್ರಾಮದ ಹೊಲದಲ್ಲಿ ಭಾನುವಾರದಂದು ಸ್ಥಳೀಯರು ಕೆಲಸದಲ್ಲಿ ತೊಡಗಿದ್ದ ವೇಳೆ PIA ಎಂದು ಹಸಿರು ಬಣ್ಣದಲ್ಲಿ ಬರೆಯಲಾದ ಬಲೂನ್ ಕಾಣಿಸಿಗೊಂಡಿದ್ದು, ಕೆಲ ಕಾಲ ಗ್ರಾಮಸ್ಥರು ಅಂತಕಕ್ಕೆ ಒಳಗಾಗಿದ್ದಾರೆ.

ಈ ವೇಳೆ ಸ್ಥಳೀಯರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದು, ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಇದೊಂದು ಆಟಿಕೆ ವಸ್ತು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರಾಜ್‌ಗಢ ಡಿಎಸ್‌ಪಿ ವಿದ್ಯಾಚಂದ್ ನೇಗಿ, ಮೇಲ್ನೋಟಕ್ಕೆ ಯಾವುದೇ ರೀತಿಯ ಬೆದರಿಕೆ ಅಂಶಗಳು ಗೋಚರಿಸಲಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !