ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಅಭಿನಯದ ‘ಟೆರರ್’ ಸಿನೆಮಾದ ಹಾಡೊಂದು ರಿಲೀಸ್ ಆಗಿದೆ. ಶಿವನ ಕುರಿತಾಗಿ ಇರೋ ಈ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಚಿತ್ರದ ಪಾತ್ರಗಳ ಪರಿಚಯವನ್ನು ಮಾಡಲಾಗಿದೆ. ಈ ಸಾಂಗ್ ನೋಡಿದ ಡೆಡ್ಲಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ರಿಲೀಸ್ ಆಗಿರುವ ಹರ..ಹರ ಮಹಾದೇವ ಅನ್ನುವ ಈ ಹಾಡನ್ನ ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ಹರ್ಷ ವರ್ಧನ್ ರಾಜಾ ಸಂಗೀತ ಕೊಟ್ಟಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮರಾವರ್ಕ್ ಮಾಡಿದ್ದು, ಭೂಷಣ್ ಕೋರಿಯೋಗ್ರಾಫಿ ಮಾಡಿದ್ದಾರೆ.
ವಿಶೇಷ ಏನಪ್ಪಾ ಅಂದ್ರೆ ಟೆರರ್ ಸಿನಿಮಾದಲ್ಲಿ ಕುಮಾರ್ ಬಂಗಾರಪ್ಪ ಪಾತ್ರ ಏನು ಅನ್ನೋದು ಇದೇ ಹಾಡಿನಲ್ಲಿಯೇ ರಿವೀಲ್ ಆಗಿದೆ. ಶಿವನ ಪೂಜಿಸೋ ಅರ್ಚಕನ ರೋಲ್ ಮಾಡಿದ್ದಾರೆ ಎನ್ನುವುದು ಈ ಹಾಡಿನಲ್ಲಿ ಕಾಣಬಹುದು. ಇದರ ಜೊತೆಗೆ ಡೈನಾಮಿಕ್ ಹೀರೋ ದೇವರಾಜ್, ನಟ ಶಶಿಕುಮಾರ್ ಹಾಗೂ ಶ್ರೀನಗರ ಕಿಟ್ಟಿ ವಿಶೇಷ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ.