CINE | ‘ಸ್ಪಿರಿಟ್’​ಗೆ ಗುಡ್​ಬೈ ಹೇಳಿದ ದೀಪಿಕಾ! ಪ್ರಭಾಸ್ ಗೆ ಜೋಡಿಯಾದ ‘ಅನಿಮಲ್’ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಸ್ಪಿರಿಟ್’ ಚಿತ್ರಕ್ಕೆ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸುತ್ತಾರೆ ಅನ್ನೋ ಮಾತು ಚಿತ್ರರಂಗದಲ್ಲಿ ಹರಿದಾಡುತ್ತಿತ್ತು. ಆದ್ರೆ ಈಗ ಚಿತ್ರ ನಿರ್ಮಾಪಕರು ಹೊಸ ನಾಯಕಿ ಯಾರೆಂದು ಅಧಿಕೃತವಾಗಿ ಘೋಷಿಸಿದ್ದಾರೆ. ಅದು ಬೇರಾರು ಅಲ್ಲ ‘ಅನಿಮಲ್’ ನಟಿ ತೃಪ್ತಿ ದಿಮ್ರಿ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ, “ನನ್ನ ಚಿತ್ರಕ್ಕೆ ನಾಯಕಿ ಆಯ್ಕೆ ಈಗ ಅಧಿಕೃತ” ಎಂದು ಬರೆದುಕೊಂಡಿದ್ದಾರೆ. ತೃಪ್ತಿ ದಿಮ್ರಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿ, ಈ ಪ್ರಯಾಣದಲ್ಲಿ ನಂಬಿಕೆ ಇಟ್ಟಿದ್ದಕ್ಕೆ ತುಂಬಾ ಕೃತಜ್ಞತೆಗಳು. ಎಂದು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ತೃಪ್ತಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಅವರ ಹೆಸರು ತಮಿಳು, ತೆಲುಗು, ಕನ್ನಡ, ಮಲಯಾಳಂ, ಚೈನೀಸ್, ಜಪಾನೀಸ್ ಮತ್ತು ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಕಾಣಿಸಿಕೊಂಡಿದೆ. ಇದು ಚಿತ್ರದ ಪ್ಯಾನ್-ಇಂಡಿಯನ್ ಬಿಡುಗಡೆಯ ಬಗ್ಗೆ ಸುಳಿವು ನೀಡುತ್ತದೆ.

ವರದಿಯ ಪ್ರಕಾರ, ಚಿತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ಕಾಲ ಚಿತ್ರೀಕರಣ ಮಾಡಲು ನಿರಾಕರಿಸಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!