ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ, “ಕಲ್ಕಿ 2898 ಎಡಿ” ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದೀಪಿಕಾ ಮತ್ತು ಪ್ರಭಾಸ್ ನಟಿಸಿರುವ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
“ಕಲ್ಕಿ 2898 ಎಡಿ” ಚಿತ್ರದಲ್ಲಿ ಹಲವಾರು ತಾರೆಯರು ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ತಮ್ಮ ಪಾತ್ರದ ಚಿತ್ರವನ್ನು ನಟಿ ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ತಮ್ಮ ಪತ್ನಿಯ ಪೋಸ್ಟ್‌ಗೆ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ.
ಕಲ್ಕಿ ಚಿತ್ರದ ಟ್ರೈಲರ್ ಜೂನ್ 10 ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭಿಮಾನಿಗಳು ಟ್ರೈಲರ್ ಗಾಗಿ ಕಾಯುತ್ತಿದ್ದಾರೆ.
View this post on Instagram