April 8, 2026
Wednesday, April 8, 2026
spot_img

CINE | ಲೇಡಿ ಸೂಪರ್‌ಸ್ಟಾರ್‌ಗಳ ದಂಡೇ ಇದ್ದರೂ ಟೀಸರ್‌ನಲ್ಲಿ ಮಿಸ್ಸಿಂಗ್: ಡೈರೆಕ್ಟರ್ ಪ್ಲ್ಯಾನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಈಗ ದಿನಗಣನೆ ಶುರುವಾಗಿದೆ. ಮಾರ್ಚ್ 19ರಂದು ವಿಶ್ವದಾದ್ಯಂತ ಅಬ್ಬರಿಸಲು ಸಜ್ಜಾಗಿರುವ ಈ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಆದರೆ, ಈ ಟೀಸರ್ ಯಶ್ ಅಭಿಮಾನಿಗಳಲ್ಲಿ ಸಣ್ಣದೊಂದು ನಿರಾಸೆಯನ್ನೂ ಮೂಡಿಸಿದೆ.

ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ಕಿಯಾರಾ ಅಡ್ವಾಣಿಯಂತಹ ಘಟಾನುಘಟಿ ನಟಿಯರಿದ್ದರೂ, ಇಡೀ ಟೀಸರ್‌ನಲ್ಲಿ ಅವರ ಮುಖ ಒಂದೂ ಕ್ಷಣವೂ ಕಾಣಿಸಿಲ್ಲ. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ನಿರ್ದೇಶಕಿ ಗೀತು ಮೋಹನ್‌ದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಹಿಳಾ ಕಲಾವಿದೆಯರ ಸಂಖ್ಯೆ ದೊಡ್ಡದಿದೆ. ಮಾಸ್ ಸಿನಿಮಾವಾಗಿದ್ದರೂ ಇಲ್ಲಿ ನಟಿಯರ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎನ್ನಲಾಗಿದೆ. ಹೀಗಿದ್ದೂ ಟೀಸರ್‌ನಲ್ಲಿ ಅವರನ್ನು ಮರೆಮಾಚಿದ್ದು ಪ್ರೇಕ್ಷಕರಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಟೀಸರ್ ಕೇವಲ ಯಶ್ ಅವರ ‘ಮಾಸ್’ ಅವತಾರಕ್ಕೆ ಸೀಮಿತವಾಗಿದ್ದರೆ, ಮುಂಬರುವ ಟ್ರೇಲರ್‌ನಲ್ಲಿ ನಟಿಯರ ಪಾತ್ರಗಳ ಅನಾವರಣವಾಗುವ ಸಾಧ್ಯತೆ ದಟ್ಟವಾಗಿದೆ. ಚಿತ್ರದ ಕಥೆಯಲ್ಲಿ ಎಲ್ಲ ಪಾತ್ರಗಳಿಗೂ ಸಮಾನ ಪ್ರಾಮುಖ್ಯತೆ ಸಿಗಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !