ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗಕ್ಕೆ ದಿನೇ ದಿನೇ ದೊಡ್ಡ ತಲೆನೋವಾಗುತ್ತಿರುವ ಪೈರಸಿ ಭೂತಕ್ಕೆ ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಸಿಲುಕಿದೆ.
ಥಿಯೇಟರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದ ಚಿತ್ರದ ಕಲೆಕ್ಷನ್ ಮೇಲೆ ಪೈರಸಿ ನೇರ ಪರಿಣಾಮ ಬೀರಿದ್ದು, ಇದ್ರ ನಡುವೆಯೇ 11ನೇ ದಿನ ಬಾಕ್ಸಾಫೀಸ್‌ನಲ್ಲಿ ಚಿತ್ರ ಅಚ್ಚರಿಯ ಏರಿಕೆ ಕಂಡಿದ್ದು, 1.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಚಿತ್ರತಂಡದ ಮಾಹಿತಿ ಪ್ರಕಾರ, ಇದುವರೆಗೆ 10 ಸಾವಿರಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ತೆಗೆದುಹಾಕಲಾಗಿದೆ. ಪೈರಸಿಯನ್ನು ತಡೆಯುವಂತೆ ಮತ್ತು ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಬೇಕೆಂದು ತಂಡ ಮನವಿ ಮಾಡಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಪೈರಸಿ ಇದುವರೆಗೆ ಕಂಡಿಲ್ಲ ಎಂದು ಚಿತ್ರತಂಡ ಆತಂಕ ವ್ಯಕ್ತಪಡಿಸಿದೆ.

