CINE | ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ, ಧನ್ಯತಾ: ಫೋಟೊ ಗ್ಯಾಲರಿ ಇಲ್ಲಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಡಾಲಿ ಧನಂಜಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಕ್ಟರ್ ಧನ್ಯತಾ ಜೊತೆ ಹಸೆಮಣೆ ಏರಿದ್ದಾರೆ. ಬಾಳ ಬಂಧನಕ್ಕೆ ಒಳಗಾಗಿರುವ ಧನ್ಯತಾ ಹಾಗೂ ಡಾಲಿ ಧನಂಜಯಗೆ ಅನೇಕ ಸೆಲೆಬ್ರಿಟಿಗಳು, ಅಪಾರ ಸಂಖ್ಯೆಯ ಅಭಿಮಾನಿಗಳು ಎಲ್ಲರೂ ಶುಭ ಹಾರೈಸಿದ್ದಾರೆ.

ಮೈಸೂರಿನಲ್ಲಿ ನಡೆದ ವಿವಾಹ ಸಮಾರಂಭದ ಫೋಟೋಗಳು ಇಲ್ಲಿವೆ.

Daali Dhananjaya Marriage (8)

ಧನ್ಯತಾ ಅವರು ವೈದ್ಯರಾಗಿದ್ದಾರೆ. ಅವರದ್ದು ಅರೇಂಜ್ ಮ್ಯಾರೇಜ್. ಕುಟುಂಬದವರು, ಆಪ್ತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಈ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ. ಫೋಟೋಗಳು ಕಲರ್​ಫುಲ್ ಆಗಿವೆ.

ಕನ್ನಡ ಮತ್ತು ಇತರೆ ಭಾಷೆಯ ಚಿತ್ರರಂಗಲ್ಲಿ ಗುರುತಿಸಿಕೊಂಡಿರುವ ಡಾಲಿ ಧನಂಜಯ ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಶುರು ಆಗಿದೆ. ಧನ್ಯತಾ ಜೊತೆ ಡಾಲಿ ಧನಂಜಯ ಅವರು ಹಸೆಮಣೆ ಏರಿದ್ದಾರೆ.

ಡಾಲಿ ಧನಂಜಯ ಹಾಗೂ ಧನ್ಯತಾ ಅವರಿಗೆ ಮೈಸೂರು ಇಷ್ಟದ ಸ್ಥಳ. ಹಾಗಾಗಿ ಮೈಸೂರಿನಲ್ಲೇ ಮದುವೆ ಮಾಡಲಾಗಿದೆ. ದೇವಸ್ಥಾನದ ಥೀಮ್​ನಲ್ಲಿ ಗ್ರ್ಯಾಂಡ್​ ಆಗಿ ಡಾಲಿ ಮದುವೆಯ ಮಂಟಪ ಸಿದ್ಧವಾಗಿತ್ತು.

ಬಹಳ ಅದ್ದೂರಿಯಾಗಿ ಡಾಲಿ ಧನಂಜಯ ಅವರ ಮದುವೆ ನಡೆದಿದೆ. ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿ ಆಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ವಿವಾಹ ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!