ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ನಯನತಾರಾ ತಮ್ಮ ಮನೋಜ್ಞ ನಟನೆಯಿಂದ ‘ಲೇಡಿ ಸೂಪರ್‌ಸ್ಟಾರ್’ ಎಂದೇ ಖ್ಯಾತರಾದವರು. ಈ ಬಿರುದಿನ ಬಗ್ಗೆ ಇದೀಗ ಒಂದು ಮನವಿ ಮಾಡಿದ್ದಾರೆ. ನನ್ನನ್ನು ‘ಲೇಡಿ ಸೂಪರ್‌ಸ್ಟಾರ್’ ಎಂದು ಕರೆಯಬೇಡಿ ಎಂದು ಫ್ಯಾನ್ಸ್‌ಗೆ ನಯನತಾರಾ ಬಹಿರಂಗ ಪತ್ರ ಬರೆದಿದ್ದಾರೆ.
“ನನ್ನ ಜೀವನವು ನಿಮ್ಮ ಪ್ರೀತಿ ಮತ್ತು ವಾತ್ಸಲ್ಯದಿಂದ ಯಾವಾಗಲೂ ಅಲಂಕರಿಸಲ್ಪಟ್ಟ ತೆರೆದ ಪುಸ್ತಕವಾಗಿದೆ. ನನ್ನ ಯಶಸ್ಸಿನ ಸಮಯದಲ್ಲಿ ನನ್ನ ಭುಜ ತಟ್ಟಿದ್ದು ಅಥವಾ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಾ. ನಿಮ್ಮಲ್ಲಿ ಹಲವರು ನನ್ನನ್ನು ‘ಲೇಡಿ ಸೂಪರ್‌ಸ್ಟಾರ್’ ಎಂದು ಪ್ರೀತಿಯಿಂದ ಕರೆಯುತ್ತೀರಿ, ಅದು ನಿಮ್ಮ ಅಪಾರ ಪ್ರೀತಿಯಿಂದ ಹುಟ್ಟಿದ ಬಿರುದು. ನನಗೆ ಅಂತಹ ಅಮೂಲ್ಯವಾದ ಬಿರುದನ್ನು ನೀಡಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ತುಂಬಾ ಋಣಿಯಾಗಿದ್ದೇನೆ. ಆದರೆ ನೀವೆಲ್ಲರೂ ನನ್ನನ್ನು ‘ನಯನತಾರಾ’ ಎಂದು ಕರೆಯಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ” ಎಂದು ನಯನತಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.