ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ‘ಧುರಂಧರ್’ ಚಿತ್ರದ ಎರಡನೇ ಭಾಗದ ಓಟಿಟಿ ಹಕ್ಕುಗಳ ವಿಚಾರದಲ್ಲಿ ಈಗ ದೊಡ್ಡ ಬದಲಾವಣೆಯಾಗಿದೆ. ಮೊದಲ ಭಾಗವನ್ನು ಪ್ರಸಾರ ಮಾಡಿದ್ದ ನೆಟ್‌ಫ್ಲಿಕ್ಸ್ ಸಂಸ್ಥೆಗೆ ಈ ಬಾರಿ ನಿರಾಸೆಯಾಗಿದ್ದು, ‘ಧುರಂಧರ್ 2’ ಹಕ್ಕುಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪಾಲಾಗಿವೆ.
‘ಧುರಂಧರ್’ ಮೊದಲ ಭಾಗ ಓಟಿಟಿಗೆ ಬಂದಾಗ ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ಸುಮಾರು 10 ನಿಮಿಷಗಳ ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಅಷ್ಟೇ ಅಲ್ಲದೆ, ಪ್ರಮುಖ ಸಂಭಾಷಣೆಗಳನ್ನು ಮ್ಯೂಟ್ ಮಾಡಿ, ಚಿತ್ರದ ದೃಶ್ಯ ವೈಭವದ ಗುಣಮಟ್ಟವನ್ನೂ ತಗ್ಗಿಸಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದು ಚಿತ್ರತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಅಸಮಾಧಾನ ತಂದಿತ್ತು. ಇದೇ ಕಾರಣಕ್ಕೆ ಎರಡನೇ ಭಾಗದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ ನೀಡದೆ ಜಿಯೋ ಸ್ಟುಡಿಯೋಸ್ ನಿರ್ಧಾರ ಬದಲಿಸಿದೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
ಆದರೆ, ಈ ಬದಲಾವಣೆಯ ಹಿಂದೆ ಕೇವಲ ಅಸಮಾಧಾನವಷ್ಟೇ ಇಲ್ಲ, ವ್ಯವಹಾರದ ತಂತ್ರವೂ ಅಡಗಿದೆ. ಜಿಯೋ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರವು ಈಗ ತನ್ನದೇ ಸಂಸ್ಥೆಯ ಭಾಗವಾಗಿರುವ ‘ಜಿಯೋ ಹಾಟ್‌ಸ್ಟಾರ್’ನಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚಿನ ಬೆಳವಣಿಗೆಯಂತೆ ಹಾಟ್‌ಸ್ಟಾರ್ ಈಗ ಜಿಯೋ ಸಮೂಹದ ಅಡಿಯಲ್ಲಿರುವುದರಿಂದ, ತನ್ನದೇ ಪ್ಲಾಟ್‌ಫಾರ್ಮ್‌ಗೆ ಹೆಚ್ಚಿನ ಮೈಲೇಜ್ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:
‘ಧುರಂಧರ್ 2’ ಚಿತ್ರದ ಟೀಸರ್ ಕೊನೆಯಲ್ಲಿ ‘ಜಿಯೋ ಹಾಟ್‌ಸ್ಟಾರ್’ ಲೋಗೋ ಕಾಣಿಸಿಕೊಂಡಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಗುಣಮಟ್ಟದ ವಿಚಾರದಲ್ಲಿ ಎಡವಿದ್ದ ನೆಟ್‌ಫ್ಲಿಕ್ಸ್‌ಗೆ ಸದ್ಯ ಈ ಬೃಹತ್ ಸಿನಿಮಾ ಕೈತಪ್ಪಿರುವುದು ದೊಡ್ಡ ನಷ್ಟವೆಂದೇ ವಿಶ್ಲೇಷಿಸಲಾಗುತ್ತಿದೆ.



