March 30, 2026
Monday, March 30, 2026
spot_img

CINE | ‘ಲವ್ ಮಾಕ್ಟೇಲ್ 3’ಗೆ ಜೈ ಎಂದ ಫ್ಯಾಮಿಲಿ ಪ್ರೇಕ್ಷಕರು: 11 ದಿನದಲ್ಲಿ ಜಬರ್ದಸ್ತ್ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ‘ಧುರಂಧರ್ 2’ ಚಿತ್ರದ ಎದುರಲ್ಲಿಯೇ ತೆರೆಗೆ ಬಂದ ‘ಲವ್ ಮಾಕ್ಟೇಲ್ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ದೊಡ್ಡ ಪ್ಯಾನ್ ಇಂಡಿಯಾ ಚಿತ್ರದ ಸ್ಪರ್ಧೆಯ ನಡುವೆಯೂ ಈ ಸಿನಿಮಾ ತನ್ನದೇ ಆದ ಪ್ರೇಕ್ಷಕ ವಲಯವನ್ನು ಸೆಳೆದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.

ಡಾರ್ಲಿಂಗ್ ಕೃಷ್ಣ ನಾಯಕತ್ವ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಫ್ಯಾಮಿಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ‘ಲವ್ ಮಾಕ್ಟೇಲ್’ ಮತ್ತು ಅದರ ಎರಡನೇ ಭಾಗದ ಯಶಸ್ಸು ಮೂರನೇ ಭಾಗದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿತ್ತು. ಆ ನಿರೀಕ್ಷೆಗಳನ್ನು ಈ ಸಿನಿಮಾ ಸಾಕಷ್ಟು ಮಟ್ಟಿಗೆ ಪೂರೈಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಸಿನಿಮಾ ಬಿಡುಗಡೆಯಾದ 11 ದಿನಗಳಲ್ಲಿ ಸುಮಾರು 11.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಎರಡನೇ ಭಾನುವಾರವೂ ಉತ್ತಮ ಆದಾಯ ಗಳಿಸಿರುವ ಈ ಚಿತ್ರ ಒಂದು ದಿನದಲ್ಲಿ 1.23 ಕೋಟಿ ರೂಪಾಯಿ ವಸೂಲಿ ಮಾಡಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಕಾರಣ ಸಿನಿಮಾ ಈಗಾಗಲೇ ಲಾಭದ ಹಾದಿಗೆ ಪ್ರವೇಶಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಚಿತ್ರದಲ್ಲಿ ಕುಟುಂಬ ಸಮೇತರಾಗಿ ನೋಡಲು ಅನುಕೂಲವಾದ ಕಥಾಹಂದರ ಪ್ರಮುಖ ಆಕರ್ಷಣೆಯಾಗಿದೆ. ಅತಿರೇಕದ ಹಿಂಸಾಚಾರ, ಡಬಲ್ ಮೀನಿಂಗ್ ಸಂಭಾಷಣೆಗಳು ಅಥವಾ ಧೂಮಪಾನ-ಮದ್ಯದ ದೃಶ್ಯಗಳಿಲ್ಲದಿರುವುದು ಫ್ಯಾಮಿಲಿ ಆಡಿಯನ್ಸ್ ಮೆಚ್ಚುಗೆಗೆ ಕಾರಣವಾಗಿದೆ. ಜೊತೆಗೆ ಚಿತ್ರದ ಹಾಡುಗಳೂ ಪ್ರೇಕ್ಷಕರ ಮನಸೆಳೆದಿವೆ.

ಇತ್ತೀಚೆಗೆ ಕಥೆ ಸಂಬಂಧಿತ ವಿವಾದ ಸೃಷ್ಟಿಯಾದರೂ ಅದು ಸುಖಾಂತ್ಯ ಕಂಡಿದ್ದು, ಈಗ ಸಿನಿಮಾ ಯಶಸ್ಸಿನ ಓಟ ಮುಂದುವರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !