September 29, 2026
Tuesday, September 29, 2026
spot_img

ಪಲ್ಯ, ಗ್ರೇವಿ & More 49 | ಚಪಾತಿಗೆ ಆಲೂಗೆಡ್ಡೆ ಪಲ್ಯ ಮಾಡೋ ಬದಲು ಸಿಹಿ ಗೆಣಸಿನ ಪಲ್ಯ ಮಾಡಿ: ತುಂಬಾ ರುಚಿಯಾಗಿರುತ್ತೆ

ಸಿಹಿ ಗೆಣಸು ಒಂದು ಆರೋಗ್ಯಕರ, ಫೈಬರ್, ವಿಟಮಿನ್‌ಗಳು ಮತ್ತು ಶಕ್ತಿಯನ್ನು ನೀಡುವ ಒಂದು ಗೆಡ್ಡೆ ತರಕಾರಿ. ಉಪವಾಸದ ದಿನಗಳಲ್ಲೂ ಹಾಗೂ ದಿನನಿತ್ಯದ ಊಟದಲ್ಲೂ ಸಿಹಿ ಗೆಣಸಿನ ಪಲ್ಯ ಸೇರಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯ ಆಯ್ಕೆ. ಕಡಿಮೆ ಸಾಮಗ್ರಿಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಪಲ್ಯ ರುಚಿಗೂ ಆರೋಗ್ಯಕ್ಕೂ ಬೆಸ್ಟ್.

ಬೇಕಾಗುವ ಸಾಮಗ್ರಿಗಳು:

ಸಿಹಿ ಗೆಣಸು – 2 ಕಪ್
ಎಣ್ಣೆ – 2 ಟೀ ಸ್ಪೂನ್
ಸಾಸಿವೆ – 1/2 ಟೀ ಸ್ಪೂನ್
ಜೀರಿಗೆ – 1/2 ಟೀ ಸ್ಪೂನ್
ಕರಿಬೇವು – ಕೆಲವು ಎಲೆಗಳು
ಹಸಿಮೆಣಸು – 2 (ಚೂರು ಮಾಡಿದವು)
ಅರಿಶಿನ – 1/4 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – 1/2 ಟೀ ಸ್ಪೂನ್
ತುರಿದ ತೆಂಗಿನಕಾಯಿ – 2 ಟೇಬಲ್ ಸ್ಪೂನ್
ನಿಂಬೆ ರಸ – 1 ಟೀ ಸ್ಪೂನ್

ತಯಾರಿಸುವ ವಿಧಾನ:

ಮೊದಲು ಸಿಹಿ ಗೆಣಸನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ.

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬಳಿಕ ಹಸಿಮೆಣಸು ಸೇರಿಸಿ ಸ್ವಲ್ಪ ಫ್ರೈ ಮಾಡಿ.

ಈಗ ಬೇಯಿಸಿದ ಗೆಣಸು ತುಂಡುಗಳನ್ನು ಹಾಕಿ ನಿಧಾನವಾಗಿ ಕಲಸಿ.

ಅದಕ್ಕೆ ಅರಿಶಿನ, ಉಪ್ಪು, ಮೆಣಸಿನ ಪುಡಿ ಸೇರಿಸಿ 3–4 ನಿಮಿಷ ಮೃದುವಾಗಿ ಹುರಿಯಿರಿ. ಕೊನೆಯಲ್ಲಿ ತುರಿದ ತೆಂಗಿನಕಾಯಿ ಮತ್ತು ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ.

Must Read