ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಚಿತ್ರವು ಬಿಡುಗಡೆಯಾದ ನಂತರ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಥೆ, ಭಯಾನಕ ತಿರುವುಗಳು ಮತ್ತು ಕುತೂಹಲಕಾರಿ ನಿರೂಪಣೆಯಿಂದ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ರಾಜ್ ಬಿ ಶೆಟ್ಟಿ ಅವರ ಅಭಿನಯ ಚಿತ್ರಕ್ಕೆ ದೊಡ್ಡ ಬಲವಾಗಿದ್ದು, ಅವರ ಪಾತ್ರವು ನೋಡುಗರಲ್ಲಿ ವಿಭಿನ್ನ ಅನುಭವ ಮೂಡಿಸುತ್ತಿದೆ. ಜೊತೆಗೆ ಅನಿರುದ್ಧ್ ಭಟ್ ಸೇರಿದಂತೆ ಇತರ ಕಲಾವಿದರು ಕೂಡ ತಮ್ಮ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿದ್ದಾರೆ.
ಇದನ್ನೂ ಓದಿ:
ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ನಡುವೆಯೇ, ಇದರ ಡಿಜಿಟಲ್ ಬಿಡುಗಡೆ ಕುರಿತು ಚರ್ಚೆ ಹೆಚ್ಚಾಗಿದೆ. ಈ ಚಿತ್ರದ ಪ್ರಸಾರ ಹಾಗೂ ಡಿಜಿಟಲ್ ಹಕ್ಕುಗಳನ್ನು ಜೀ ಸಂಸ್ಥೆ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೊದಲಿಗೆ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗಿ, ಬಳಿಕ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ 6ರಂದು ಬಿಡುಗಡೆಯಾದ ಈ ಸಿನಿಮಾ ಸಾಮಾನ್ಯವಾಗಿ ನಾಲ್ಕು ವಾರಗಳ ನಂತರವೇ ಡಿಜಿಟಲ್ ಮೂಲಕ ಪ್ರೇಕ್ಷಕರಿಗೆ ಲಭ್ಯವಾಗುವ ಸಾಧ್ಯತೆ ಇದೆ. ಈ ಲೆಕ್ಕದಲ್ಲಿ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಮನೆಮನೆಗೂ ತಲುಪಬಹುದು ಎನ್ನಲಾಗುತ್ತಿದೆ.



