ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಮೂರು ವರ್ಷಗಳಾಗಿದೆ. ಇದೀಗ ಹೊಂಬಾಳೆ ಸಂಸ್ಥೆಯಿಂದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ.
ಹೌದು, ‘ಕೆಜಿಎಫ್ 2’ ಚಿತ್ರ ಬಿಡುಗಡೆಯಾಗಿ ಇಂದಿಗೆ 3 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ‘ಕೆಜಿಎಫ್ ಚಾಪ್ಟರ್ 3’ ಬರೋದು ಫಿಕ್ಸ್ ಎಂದು ಘೋಷಿಸಿದೆ.
“ಈ ಚಿತ್ರ ಬಾಕ್ಸಾಫೀಸ್ ಧೂಳಿಪಟ ಮಾಡಿದ್ದಲ್ಲದೇ ಗಡಿಯನ್ನೂ ಮೀರಿ ಬೆಳೆದಿದೆ. ಸಿನಿಮಾ ಪ್ರಪಂಚದಾದ್ಯಂತ ‘ಕೆಜಿಎಫ್’ ಚಿತ್ರವನ್ನು ಸೆಲೆಬ್ರೇಟ್ ಮಾಡ್ತಿರುವಾಗ ಮುಂದಿನ ಅಧ್ಯಾಯದ ನಿರೀಕ್ಷೆ ಬಲವಾಗಿದೆ. ‘ಕೆಜಿಎಫ್ 3’ ಮೇಲಿನ ನಿಮ್ಮ ನಿರೀಕ್ಷೆಯನ್ನ ಸುಳ್ಳು ಮಾಡೋದಿಲ್ಲ. ರಾಕಿ ಭಾಯ್ ಪರಂಪರೆ ಜೀವಂತವಾಗಿದೆ ಮತ್ತು ಜಗತ್ತು ವೀಕ್ಷಿಸುತ್ತಿದೆ. ಮುಂದಿನ ಅಧ್ಯಾಯಕ್ಕಾಗಿ ಕಾಯ್ತಿರಿ” ಎಂದು ಹೊಂಬಾಳೆ ಸಂಸ್ಥೆ ಅಧಿಕೃತ ಸಂದೇಶ ಕೊಟ್ಟಿದೆ. ಈ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಅಂತೂ ಫುಲ್ ಥ್ರಿಲ್ ಆಗಿದ್ದಾರೆ.