CINE | ‘ಘಾಟಿ’ ಸಿನಿಮಾದ ಮೊದಲ ಸಾಂಗ್ ರಿಲೀಸ್! ಪ್ರೇಕ್ಷಕರ ಮನಗೆದ್ದ “ಸೈಲೋರ್”

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರಿಶ್ ಜಗರ್ಲಮುಡಿ ನಿರ್ದೇಶನದ ಬಹುನಿರೀಕ್ಷಿತ ಬಹುಭಾಷಾ ಸಿನಿಮಾ ‘ಘಾಟಿ’ ಈಗ ಹೊಸ ಹಾಡೊಂದನ್ನು ಬಿಡುಗಡೆ ಮಾಡಿ ಮತ್ತೆ ಗಮನ ಸೆಳೆದಿದೆ. ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಜನಪದ ಪ್ರೇರಿತ “ಸೈಲೋರ್” ಎಂಬ ಹಾಡು ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜಾನಪದ ಲಯ, ನವವಿವಾಹಿತ ದಂಪತಿಯ ಸಂಭ್ರಮ ಹಾಗೂ ನೈಸರ್ಗಿಕ ಸೌಂದರ್ಯದ ಹಿನ್ನೆಲೆ ಈ ಹಾಡಿಗೆ ವಿಶೇಷ ಮೆರುಗು ನೀಡಿದೆ.

ಈ ಹಾಡಿನಲ್ಲಿ ಅನುಷ್ಕಾ ಶೆಟ್ಟಿ ಮತ್ತು ವಿಕ್ರಮ್ ಪ್ರಭು ರೊಮ್ಯಾಂಟಿಕ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗೀತೆಗೆ ನಾಗವೆಲ್ಲಿ ವಿದ್ಯಾಸಾಗರ್ ಸಂಗೀತ ನೀಡಿದ್ದು, ಕೃಷ್ಣ ಬರೆದ ಸಾಹಿತ್ಯ ಮತ್ತು ಲಿಪ್ಸಿಕಾ, ಸಾಗರ್, ಸೋನಿ ಹಾಡಿರುವ ಧ್ವನಿ ಹಾಡಿಗೆ ಜೀವ ತುಂಬಿದೆ.

ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿದ್ದು, ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಗರ್ಲಮುಡಿ ನಿರ್ವಾಹಕರಾದ ಫಸ್ಟ್ ಫ್ರೇಮ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಡಿಯಲ್ಲಿ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಘಾಟಿ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಮನೋಜ್ ರೆಡ್ಡಿ ಛಾಯಾಗ್ರಹಣ, ತೋಟ ತಾರಣಿ ಕಲಾ ನಿರ್ದೇಶನ, ರಾಜು ಸುಂದರಂ ನೃತ್ಯ ಸಂಯೋಜನೆ ಹಾಗೂ ಚಾಣಕ್ಯ ರೆಡ್ಡಿ ತುರುಪು ಸಂಪಾದನೆಯೊಂದಿಗೆ ಚಿತ್ರ ಉನ್ನತ ತಾಂತ್ರಿಕ ಗುಣಮಟ್ಟದಲ್ಲಿ ಮೂಡಿಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!