ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಘಾಟಿ’ ಈಗಾಗಲೇ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಹುಟ್ಟಿಸಿದೆ. ನಟಿ ಅನುಷ್ಕಾ ಶೆಟ್ಟಿ ಹಾಗೂ ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ಅವರ ‘ವೇದಂ’ ನಂತರ ಮತ್ತೊಮ್ಮೆ ಜೊತೆಯಾಗಿರುವ ಈ ಚಿತ್ರ, ಶ್ರೇಷ್ಠ ತಾಂತ್ರಿಕ ಗುಣಮಟ್ಟದೊಂದಿಗೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ಬಿಡುಗಡೆಗೊಂಡ ಗ್ಲಿಂಪ್ಸ್‌ಗಳು ಪ್ರೇಕ್ಷಕರಲ್ಲಿ ಅತ್ಯಧಿಕ ಕ್ರೇಜ್ ಹುಟ್ಟುಹಾಕಿದ್ದು. ವಿಶೇಷವಾಗಿ ಅನುಷ್ಕಾ ಅವರ ಗಂಭೀರ ನೋಟವಿರುವ ಸೀನ್ ಅಭಿಮಾನಿಗಳನ್ನು ಹೆಚ್ಚು ಆಕರ್ಷಿಸಿದೆ. ಚಿತ್ರದ ಛಾಯಾಚಿತ್ರಗಳಲ್ಲಿ ಸ್ಪಷ್ಟವಾಗಿ ಒಂದು ಹಳ್ಳಿಗಾಡಿನ ಹಿನ್ನಲೆ, ಕಚ್ಚಾ ನೈಸರ್ಗಿಕ ಚಿತ್ರಣ ಎದ್ದು ಕಾಣುತ್ತಿದೆ.
ಈಗಾಗಲೇ ನಿರ್ಮಾಪಕರು ಆಗಸ್ಟ್ 6ರಂದು ಟ್ರೇಲರ್ ಬಿಡುಗಡೆ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. UV ಕ್ರಿಯೇಷನ್ಸ್ ಸಂಸ್ಥೆಯೊಂದಿಗೆ ಅನುಷ್ಕಾ ನಾಲ್ಕನೇ ಬಾರಿಗೆ ಕೆಲಸ ಮಾಡುತ್ತಿರುವುದು ಈ ಚಿತ್ರಕ್ಕೆ ಇನ್ನಷ್ಟು ವಿಶೇಷತೆ ನೀಡುತ್ತಿದೆ.
ಚಿತ್ರದಲ್ಲಿ ಛಾಯಾಗ್ರಹಣವನ್ನು ಮನೋಜ್ ರೆಡ್ಡಿ ಕಟಾಸಾನಿ ನಿರ್ವಹಿಸುತ್ತಿದ್ದು, ಸಂಗೀತವನ್ನು ನಾಗವೆಲ್ಲಿ ವಿದ್ಯಾಸಾಗರ್ ನೀಡುತ್ತಿದ್ದಾರೆ. ಸಂಭಾಷಣೆಗೆ ಸಾಯಿ ಮಾಧವ್ ಬುರ್ರಾ, ಸಂಕಲನಕ್ಕೆ ವೆಂಕಟ್ ಎನ್.ಸ್ವಾಮಿ ಹಾಗೂ ಕಲಾ ನಿರ್ದೇಶನಕ್ಕೆ ತೋಟ ತರಣಿ ಅವರ ಸೇವೆ ಲಭ್ಯವಾಗಿದೆ.
ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ‘ಘಾಟಿ’ ಚಿತ್ರದ ಯಶಸ್ಸು ‘ವೇದಂ’ ಚಿತ್ರದ ಮಟ್ಟಕ್ಕೆ ಏರಬಹುದಾ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.