ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಹರಿಹರ ವೀರಮಲ್ಲು’ ಸೆನ್ಸಾರ್ ಕ್ಲಿಯರೆನ್ಸ್ ಪಡೆದಿದೆ. ಜುಲೈ 24ರಂದು ಭವ್ಯವಾಗಿ ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೆ ಟ್ರೈಲರ್ ಬಿಡುಗಡೆಯ ನಂತರ ಭಾರಿ ಕ್ರೇಜ್ ಮೂಡಿದ್ದು, ಚಿತ್ರ ಪ್ರೇಮಿಗಳು ಆತುರದಿಂದ ಕಾಯುತ್ತಿದ್ದಾರೆ. ನಿರ್ದೇಶಕರಾಗಿ ಕ್ರಿಶ್ ಜಾಗರ್ಲಮೂಡಿ ಮತ್ತು ಜ್ಯೋತಿ ಕೃಷ್ಣ ದುಡಿಯಿದ್ದು, ಚಿತ್ರಕ್ಕೆ U/A ಸರ್ಟಿಫಿಕೇಟ್ ಲಭಿಸಿದೆ.
ಚಿತ್ರದ ಕಥಾವಸ್ತು 17ನೇ ಶತಮಾನದ ಮೊಘಲ್ ಕಾಲಘಟ್ಟದಲ್ಲಿ ನಡೆಯುತ್ತದೆ. ಪವನ್ ಕಲ್ಯಾಣ್ ಐತಿಹಾಸಿಕ ಯೋಧ ಹರಿಹರ ವೀರಮಲ್ಲು ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರದಲ್ಲಿ ಅವರು ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡುವ ಧೈರ್ಯಶಾಲಿ ಹೀರೋ ಆಗಿ ಕಾಣಿಸಲಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಈ ಚಿತ್ರದಲ್ಲಿ ಪ್ರಮುಖ ಖಳನಾಯಕನಾಗಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ನಿಧಿ ಅಗರ್ವಾಲ್, ನರ್ಗೀಸ್ ಫಕ್ರಿ, ನೋರಾ ಫತೇಹಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಲಿದ್ದಾರೆ. ಎಂ.ಎಂ. ಕೀರವಾಣಿ ಅವರ ಸಂಗೀತ ಈ ಚಿತ್ರಕ್ಕೆ ವಿಶೇಷ ಆಕರ್ಷಣೆ ನೀಡಿದ್ದು, ಹಿನ್ನಲೆ ಸಂಗೀತಕ್ಕೂ ತೀಕ್ಷ್ಣ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದ ಅವಧಿ 2 ಗಂಟೆ 42 ನಿಮಿಷಗಳಾಗಿದ್ದು, ಸೆನ್ಸಾರ್ ಮಂಡಳಿ ಕಥೆ ಹಾಗೂ ತಾಂತ್ರಿಕ ಪ್ರಸ್ತುತಿಕರಣವನ್ನು ಮೆಚ್ಚಿಕೊಂಡಿದೆ. ಚಿತ್ರದ ಪ್ರಾಮಾಣಿಕ ಕಲೆ ಮತ್ತು ಪವನ್ ಕಲ್ಯಾಣ್ ಅವರ ಅಭಿನಯವು ವಿಶೇಷವಾಗಿ ಗಮನ ಸೆಳೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಜುಲೈ 20ರಂದು ವಿಜಯವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಯುಎಸ್‌ನಲ್ಲಿ ಅಡ್ವಾನ್ಸ್ ಬುಕಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಪವನ್ ಕಲ್ಯಾಣ್ ಅಭಿಮಾನಿಗಳು ಚಿತ್ರವನ್ನು ಗ್ರ್ಯಾಂಡ್ ಆಗಿ ಸ್ವಾಗತಿಸಲು ಸಜ್ಜಾಗಿದ್ದಾರೆ.
ಎ.ಎಂ. ರತ್ನಂ ನಿರ್ಮಾಣದಲ್ಲಿ ಮೆಗಾ ಸೂರ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎ. ದಯಾಕರ್ ರಾವ್ ನಿರ್ಮಿಸಿರುವ ಈ ಚಿತ್ರ, ಪವನ್ ಕಲ್ಯಾಣ್ ಅವರ ವೀಕ್ಷಕರಿಗೆ ಮತ್ತೊಂದು ಅದ್ಭುತ ಮನೋರಂಜನೆ ನೀಡಲಿದೆ ಎಂಬ ನಿರೀಕ್ಷೆ ಇದೆ.