CINE | ಬಾಕ್ಸ್ ಆಫೀಸ್ ನಲ್ಲಿ ಹೇಗಿದೆ ‘ಮಾ’ ಕ್ರೇಜ್ ? 3 ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕಾಜಲ್ ಅಗರವಾಲ್ ಅಭಿನಯದ ಹೊಸ ಹಾರರ್ ಸಿನಿಮಾ ‘ಮಾ’ ಬಿಡುಗಡೆಯಾದ ದಿನದಿಂದಲೇ ವಿಮರ್ಶಕರ ಹಾಗೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗೆ ವ್ಯಕ್ತವಾಗಿದೆ. ಈ ಚಿತ್ರವು ಬಾಲಿವುಡ್‌ನಲ್ಲಿ ‘ಕಣ್ಣಪ್ಪ’, ‘ಸಿತಾರೆ ಜಮೀನ್ ಪರ್’ ಮತ್ತು ‘ಹೌಸ್ ಫುಲ್ 5’ ಚಿತ್ರಗಳ ಜತೆಗೆ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧಿಸುತ್ತಿದೆ.

ಕಡಿಮೆ ಬಜೆಟ್‌ನ ಚಿತ್ರವಾಗಿದ್ದರೂ, ‘ಮಾ’ ಮೊದಲ ದಿನವೇ 4.65 ಕೋಟಿ ಗಳಿಸಿದ್ದು, ಹಾರರ್ ಪ್ರೇಮಿಗಳಿಗೆ ಇದು ಸಾಕಷ್ಟು ಮನೋರಂಜನೆ ನೀಡಿದೆ ಎಂದು ಕೆಲ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಮೊದಲ ದಿನದ relatively ಕಡಿಮೆ ಓಪನಿಂಗ್ ಬಳಿಕ, ಶನಿವಾರದಂದು (ಜೂನ್ 28) ಸಿನಿಮಾ 6 ಕೋಟಿ ಗಳಿಸಿದ್ದು, ಒಟ್ಟು 29.03% ಏರಿಕೆಯನ್ನು ದಾಖಲು ಮಾಡಿದೆ.

ಆದರೆ, ಮೂರನೇ ದಿನವಾದ ಭಾನುವಾರ (ಜೂನ್ 29) ಬೆಳಗಿನ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಹಾಜರಾತಿ ಸ್ವಲ್ಪ ಕಡಿಮೆ ಕಂಡುಬಂದಿದ್ದು, ಇದರ ಪರಿಣಾಮ ವಾರಾಂತ್ಯದ ಒಟ್ಟು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಕೆಲವಷ್ಟು ಪ್ರಭಾವ ಬೀರಬಹುದು.

ಮೂರನೇ ದಿನದಲ್ಲಿ ‘ಮಾ’ 6.75 ಕೋಟಿ ಗಳಿಸಿದ್ದು, ಇದರೊಂದಿಗೆ, ‘ಮಾ’ ಹಾರರ್ ಸಿನಿಮಾ ಮೊದಲ ಮೂರು ದಿನಗಳಲ್ಲಿ ಒಟ್ಟಾರೆ 17.40 ಕೋಟಿ ಗಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!