ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಪಾಲು ಬಾಲಿವುಡ್ ತಾರಾ ಜೋಡಿಗಳು ಒಂದೇ ಮದುವೆಯಾಗಿ ದೀರ್ಘಕಾಲ ಒಟ್ಟಿಗೆ ಜೀವನ ನಡೆಸುತ್ತಿರುವ ಜೋಡಿಗಳ ಪೈಕಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಜೋಡಿಯೂ ಒಂದು.
ಆದರೆ ಈಗ ಟ್ವಿಂಕಲ್ ಖನ್ನಾ ಅವರು ತಮ್ಮ ಮಕ್ಕಳ ಮದುವೆಯ ಬಗ್ಗೆ ಪ್ರತಿಕ್ರೆಯೆ ನೀಡಿದ್ದು ಸಕತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಏನದು ವಿಷ್ಯ ಅಂತೀರಾ, ನಟಿ ಟ್ವಿಂಕಲ್ ಖನ್ನಾ ಅವರು ತಮ್ಮ ಇಬ್ಬರೂ ಮಕ್ಕಳು ಓಡಿ ಹೋಗಿ ಮದುವೆ ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಅಂಕಣದಲ್ಲಿ ಟ್ವಿಂಕಲ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಪೂರ್ವ ವಿವಾಹದ ಪಾರ್ಟಿಯ ಬಗ್ಗೆ ಹೇಳುವ ಸಮಯದಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ, ಇದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಅಕ್ಷಯ್ ಮತ್ತು ಟ್ವಿಂಕಲ್ ಅವರ ಮಗ ಆರವ್ಗೆ ಈಗ 21 ವರ್ಷ ಹಾಗೂ ಮಗಳು ನಿತಾರಾಗೆ 11 ವರ್ಷ. ಇವರಿಬ್ಬರೂ ಮದುವೆ ವಯಸ್ಸಿಗೆ ಬಂದಾಗ ಓಡಿ ಹೋಗಿ ಮದುವೆಯಾಗಲಿ ಎಂದು ದೇವರಲ್ಲಿ ಬೇಡುತ್ತೇನೆ ಎನ್ನುತ್ತಾರೆ ಟ್ವಿಂಕಲ್ ಖನ್ನಾ.
ಆದರೆ ಹೀಗೆ ಹೇಳುವುದಕ್ಕೂ ಒಂದು ಕಾರಣ ಇದೆ, ಟ್ವಿಂಕಲ್ ಹೇಳಿದ್ದೇನೆಂದರೆ, ಮದುವೆಯ ಪೂರ್ವ ಸಿದ್ಧತೆಗಳು ತುಂಬಾ ಅದ್ದೂರಿಯಾಗಿ ಇತ್ತು. ಆದರೆ ನೀತಾ ಬಾಬಿಯ ಡ್ಯಾನ್ಸ್ ನೋಡಿ ನನಗೆ ಟೆನ್ಶನ್ ಆಗಿದೆ. ಮಕ್ಕಳ ಮದುವೆಯಲ್ಲಿ, ನಾನು ತುಂಬಾ ಸೊಗಸಾಗಿ, ಸುಂದರವಾಗಿ, ಅದ್ಭುತವಾಗಿ ನೃತ್ಯ ಮಾಡಲಾರೆ. ಅದಕ್ಕೇ ಮಕ್ಕಳು ಓಡಿ ಹೋಗಿ ಮದ್ವೆಯಾದರೆ ನನಗೆ ಈ ಪ್ರಮೇಯ ಬರುವುದಿಲ್ಲ ಎಂದಿದ್ದಾರೆ.