ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು 60 ನೇ ವರ್ಷಕ್ಕೆ ಕಾಲಿಟ್ಟಿರುವ ನಟ ಆಮಿರ್ ಖಾನ್ ವೈಯಕ್ತಿಕ ಜೀವನ ಮತ್ತೆ ಈಗ ಸುದ್ದಿಯಲ್ಲಿದೆ. ರೀನಾ ದತ್ತ ಮತ್ತು ಕಿರಣ್ ರಾವ್ ನಂತರ, ಈಗ ಅವರ ಜೀವನದಲ್ಲಿ ಮತ್ತೆ ಹೊಸ ಪ್ರೀತಿ ಶುರುವಾಗಿದೆ. ಆ ಪ್ರೀತಿ ಬೇರಾರು ಅಲ್ಲ ಬೆಂಗಳೂರಿನ ಗೌರಿ ಸ್ಪ್ರಾಟ್.
ಈ ಬಗ್ಗೆ ಓಪನ್ ಆಗಿಯೇ ಮಾಧ್ಯಮದವರೊಂದಿಗೆ ಮಾತಾಡಿರುವ ಆಮಿರ್ ಖಾನ್, ನನ್ನ ಗೌರಿಯ ಒಡನಾಟಕ್ಕೆ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ನೀವೆಲ್ಲರೂ ಗೌರಿಯನ್ನು ಭೇಟಿ ಮಾಡಲು ಇದು ಒಳ್ಳೆಯ ಅವಕಾಶ ಎಂದು ನಾನು ಭಾವಿಸಿದ್ದೇನೆ. ಇನ್ನು ನಾವು ಅಡಗಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕಳೆದ 25 ವರ್ಷಗಳಿಂದ ಇಬ್ಬರಿಗೂ ಪರಿಚಯವಿತ್ತು, ಆದರೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಮುಂಬೈನಲ್ಲಿ ಭೇಟಿಯಾದ ಬಳಿಕ ಆಪ್ತ ಸ್ನೇಹಿತರಾದರು ಎಂದು ಆಮಿರ್ ಹೇಳಿದ್ದಾರೆ.
ರೀನಾ ದತ್ತಾರೊಂದಿಗಿನ ಅವರ ದಾಂಪತ್ಯ ಜೀವನ 16 ವರ್ಷಗಳ ಕಾಲ ನಡೆಯಿತು. ನಂತರ ಕಿರಣ್ ರಾವ್ ರೊಂದಿಗಿನ ಸಂಬಂಧವೂ ಕೂಡ 16 ವರ್ಷಗಳ ಕಾಲ ನಡೆಯಿತು. ಎರಡೂ ಸಂಬಂಧಗಳಿಂದ ನಾನು ಬಹಳಷ್ಟು ಕಲಿತೆ. ಹಳೆಯ ದಾಂಪತ್ಯ ಜೀವನದಿಂದ ಈಗ ಹೊರ ಬಂದಿದ್ದರೂ, ಅವರ ಜೊತೆಗಿನ ಸಂಬಂಧ, ಒಡನಾಟ ಹಾಗೇ ಇದೆ ಎಂದಿದ್ದಾರೆ.