ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸಿನಿರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾಗಳಾದ ವಿಜಯ್ ದಳಪತಿ ಅಭಿನಯದ ‘ಜನ ನಾಯಗನ್’ ಮತ್ತು ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ 2026ರ ಜನವರಿಯ ಪೊಂಗಲ್ ಹಬ್ಬದ ವೇಳೆ ಬಾಕ್ಸ್ ಆಫೀಸ್ ಗೆ ಬರೋಕೆ ರೆಡಿ ಆಗಿದೆ. ಈಗಾಗಲೇ ‘ಜನ ನಾಯಗನ್’ ಚಿತ್ರತಂಡ ಜನವರಿ 9, 2026ಕ್ಕೆ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.
ವಿಜಯ್ ದಳಪತಿ ಅಭಿನಯದ ಕೊನೆಯ ಸಿನಿಮಾ ಎನ್ನುವ ಕಾರಣದಿಂದ ಈ ಸಿನಿಮಾ ಮೇಲೆ ಸಹಜವಾಗಿಯೇ ಬೆಟ್ಟದಷ್ಟು ನಿರೀಕ್ಷೆಗಳಿವೆ. ನಿರ್ದೇಶಕ ವೆಂಕಟ್ ಪ್ರಭು ಮಾರ್ಗದರ್ಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲವನ್ನೂ ಹುಟ್ಟುಹಾಕಿದೆ.
ಇತ್ತ, ‘ಪರಾಶಕ್ತಿ’ ಎಂಬ ಶಕ್ತಿ ಹೆಸರಿನೊಂದಿಗೆ ಬರುತ್ತಿರುವ ಶಿವಕಾರ್ತಿಕೇಯನ್ ಚಿತ್ರದ ಬಗ್ಗೆ ಕೂಡಾ ಅಭಿಮಾನಿಗಳ ನಿರೀಕ್ಷೆ ಏರಿದೆ. ಚಿತ್ರದ ನಿರ್ದೇಶಕಿ ಸುಧಾ ಕೊಂಗರಾ ಈ ಬಗ್ಗೆ ಮೌನ ಮುರಿದಿದ್ದು, “ಚಿತ್ರದ ಶೂಟಿಂಗ್ ಪ್ರಗತಿಯಲ್ಲಿ ಇದೆ. ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಪಕರು ತೀರ್ಮಾನ ಮಾಡಲಿದ್ದಾರೆ. ಡೇಟ್ ಕ್ಲ್ಯಾಶ್ ಆಗುತ್ತದಾ ಎಂಬುದು ನನ್ನ ಕೈಯಲ್ಲಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಈ ಎರಡೂ ಚಿತ್ರಗಳು ಒಂದೇ ದಿನ ಅಥವಾ ಒಂದೇ ವಾರ ತೆರೆ ಕಂಡರೆ, ಅದು ತಮಿಳು ಚಿತ್ರರಂಗದ ಬಾಕ್ಸ್ ಆಫೀಸ್ ಒಂದು ಇತಿಹಾಸದಲ್ಲಿ ಸೃಷ್ಟಿಸಲಿದೆ.