ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರಾಠಿ ಹಾರರ್ ಚಿತ್ರ ‘ಜಾರನ್’ ಜೀ5 ನಲ್ಲಿ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆದರೂ, ಜೀ5 ಪ್ಲ್ಯಾಟ್‌ಫಾರ್ಮ್ ಇದರ ಮರುಪ್ರಚಾರಕ್ಕೆ ಮುಂದಾಗಿದೆ. ಬ್ಲ್ಯಾಕ್ ಮ್ಯಾಜಿಕ್ ಮತ್ತು ಮನೋವೈಜ್ಞಾನಿಕ ಭಯವನ್ನು ಒಟ್ಟುಗೂಡಿಸಿರುವ ಕಥಾಹಂದರದಿಂದ ಸಿನಿಮಾ ಇದೀಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.
ಈ ವರ್ಷ ಜೂನ್ 6ರಂದು ತೆರೆ ಕಂಡ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 9 ಕೋಟಿ ರೂ. ಕಲೆಹಾಕಿತ್ತು. ಅಮೃತ ಸುಭಾಷ್ ಹಾಗೂ ಅನಿತಾ ದಾತೆ ಅವರ ಗಂಭೀರ ಪಾತ್ರ ನಿರ್ವಹಣೆಗೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಚಿತ್ರದಲ್ಲಿನ ಬ್ಲ್ಯಾಕ್ ಮ್ಯಾಜಿಕ್ ಪ್ರೇಕ್ಷಕರನ್ನು ಹಿಡಿದಿಟ್ಟಿದೆ.
ಹೃಷಿಕೇಶ್ ಗುಪ್ತೇ ನಿರ್ದೇಶನದ ಜಾರನ್ ಒಂದು ಕುಟುಂಬದ ಮೇಲಿನ ರಹಸ್ಯ ಶಾಪ ಮತ್ತು ಅದರಿಂದ ಉಂಟಾಗುವ ತೊಂದರೆಗಳನ್ನು ಈ ಕಥೆ ಹೇಳುತ್ತದೆ. OTT ನಲ್ಲಿ ಮತ್ತೆ ಬದಿರೋದ್ರಿಂದ ಈ ಸಿನಿಮಾ ಪುನಃ ಟ್ರೆಂಡ್ ಆಗುತ್ತಿದೆ.

