ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ ಹೊಸ ಸಿನಿಮಾ ‘ಗುಡ್ ಬ್ಯಾಡ್ ಅಗ್ಲಿ’ ವಿರುದ್ಧ ಸಂಗೀತ ನಿರ್ದೇಶಕ ಇಳಯರಾಜ ದೂರು ದಾಖಲಿಸಿದ್ದು, ಐದು ಕೋಟಿ ರೂಪಾಯಿ ಪರಿಹಾರ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ.
ಕಳೆದ ವಾರವಷ್ಟೆ ಬಿಡುಗಡೆಯಾದ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ಕೆಲವು ಹಳೆಯ ಹಾಡುಗಳನ್ನು ನಿರ್ದೇಶಕರು ಬಳಸಿದ್ದಾರೆ. ಇಳಯರಾಜ ಸಂಗೀತ ನೀಡಿರುವ ತಮಿಳು ಹಾಡುಗಳಾದ ‘ಒತ್ತ ರೂಪ ತಾರೆನ್’, ‘ಇಲಮೈ ಇದೋ ಇದೋ’, ‘ಎನ್ ಜೋಡಿ ಮಂಜ ಕುರುವಿ’ ಹಾಡುಗಳನ್ನು ಬಳಸಿಕೊಳ್ಳಲಾಗಿದೆ.
ಹೀಗಾಗಿ ಸಂಗೀತ ನಿರ್ದೇಶಕ ಇಳಯರಾಜ ಅವರು ಸಿನಿಮಾ ತಂಡಕ್ಕೆ ನೊಟೀಸ್ ಕಳಿಸಿದ್ದು ತಮ್ಮ ಸಂಗೀತ ನಿರ್ದೇಶನದ ಹಾಡುಗಳನ್ನು ತಮ್ಮ ಒಪ್ಪಿಗೆ ಇಲ್ಲದೆ ಬಳಸಿದ್ದಕ್ಕೆ ಐದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಿನಿಮಾದಿಂದ ತಮ್ಮ ಸಂಗೀತ ನಿರ್ದೇಶನದ ಹಾಡುಗಳನ್ನು ತೆಗೆಯಬೇಕು ಹಾಗೂ ಚಿತ್ರತಂಡ ಬಹಿರಂಗ ಕ್ಷಮೆಯನ್ನೂ ಸಹ ಕೇಳಬೇಕು ಎಂದಿದ್ದಾರೆ.