Sunday, October 26, 2025

CINE | ಬಾಕ್ಸ್ ಆಫೀಸ್ ಚಿಂದಿ ಮಾಡ್ತಿದೆ ‘ಕಾಂತಾರ: ಚಾಪ್ಟರ್ 1’: ಹಿಂದಿ ಆವೃತ್ತಿಯ ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಯಾದ 25 ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ನೀಡಿದ ಲೆಕ್ಕಾಚಾರದ ಪ್ರಕಾರ, ಸಿನಿಮಾ 818 ಕೋಟಿ ರೂ. ಗಳಿಕೆಯನ್ನು ತಲುಪಿದ್ದು, ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮಾತ್ರವಲ್ಲದೆ ವಿಶ್ವಬಾಕ್ಸ್ ಆಫೀಸ್ನಲ್ಲಿ ಸಹ ಗಮನಾರ್ಹ ಆದಾಯ ದಾಖಲಿಸಿದೆ. ವಿಶೇಷವಾಗಿ ಹಿಂದಿ ಆವೃತ್ತಿಯು 200 ಕೋಟಿ ರೂ. ಕಲೆಹಾಕಿದ್ದು, ಇದು ದಕ್ಷಿಣ ಭಾರತದ ಸಿನಿಮಾ ಇತಿಹಾಸದಲ್ಲಿ ವಿಶೇಷ ಸಾಧನೆಯಾಗಿದೆ.

ಈ ವರ್ಷ ಬಿಡುಗಡೆಯಾದ ಎಲ್ಲ ಸಿನಿಮಾಗಿಂತಲೂ ಹೆಚ್ಚು ಕಲೆಕ್ಷನ್ ಗಳಿಸಿರುವ ‘ಕಾಂತಾರ: ಚಾಪ್ಟರ್ 1’ ಶೀಘ್ರದಲ್ಲೇ 1000 ಕೋಟಿ ರೂ. ಕ್ಲಬ್ ಸೇರುವ ನಿರೀಕ್ಷೆಯಲ್ಲಿ ಇದೆ. ಈ ಸಾಧನೆಯೊಂದಿಗೆ, ಕನ್ನಡ ಸಿನಿಮಾ ಎರಡನೇ ಬಾರಿ 1000 ಕೋಟಿ ರೂ. ಗ್ಲೋಬಲ್ ಕಲೆಕ್ಷನ್ ಕ್ಲಬ್ ಸೇರಲಿದೆ. ಹಿಂದಿ ಪ್ರೇಕ್ಷಕರಿಂದ ಚಿತ್ರಕ್ಕೆ ದೊರೆತ ಪ್ರೀತಿ ಮತ್ತು ಬೆಂಬಲವು ಕೂಡ ಗಮನಾರ್ಹವಾಗಿದೆ.

ಇನ್ನು ಅಕ್ಟೋಬರ್ 31 ರಂದು ‘ಕಾಂತಾರ: ಚಾಪ್ಟರ್ 1’ ಇಂಗ್ಲೀಷ್ ಆವೃತ್ತಿಯೂ ಬಿಡುಗಡೆಯಾಗಲಿದೆ. ಇದು ಭಾರತದ ಮೆಟ್ರೋ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ಪ್ರದರ್ಶನಕ್ಕೆ ಬರುವ ನಿರೀಕ್ಷೆ ಇದೆ. ಈ ಮೂಲಕ ಚಿತ್ರದ ಗ್ಲೋಬಲ್ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ನಿರ್ಮಾಪಕರು ಮತ್ತು ನಟ ರಿಷಬ್ ಶೆಟ್ಟಿ ಈ ಆವೃತ್ತಿಯ ಪ್ರಚಾರಕ್ಕಾಗಿ ವಿದೇಶಗಳಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !!