August 27, 2026
Thursday, August 27, 2026
spot_img

CINE | ಬಾಕ್ಸ್ ಆಫೀಸ್‌ನಲ್ಲಿ ‘ಕರಾವಳಿ’ ಅಬ್ಬರ: ಮೂರೇ ದಿನಕ್ಕೆ ಕೋಟಿ ಕೋಟಿ ಲೂಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದುಕೊಳ್ಳುತ್ತಿದೆ. ವಿವಾದಗಳನ್ನೆಲ್ಲ ಮೆಟ್ಟಿ ನಿಂತು ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಕನ್ನಡಿಗರು ಭರ್ಜರಿ ಓಪನಿಂಗ್ ನೀಡಿದ್ದಾರೆ. ಥಿಯೇಟರ್‌ಗಳಿಗೆ ಖುದ್ದಾಗಿ ಭೇಟಿ ನೀಡಿದ ನಟ ರಾಜ್ ಬಿ. ಶೆಟ್ಟಿ, ಅಭಿಮಾನಿಗಳ ಅಭೂತಪೂರ್ವ ಪ್ರೀತಿ ಕಂಡು ಧನ್ಯವಾದ ಅರ್ಪಿಸಿದ್ದಾರೆ. ಅತಿಥಿ ಪಾತ್ರದಲ್ಲೂ ಮಿಂಚಿರುವ ಅವರ ನಟನೆಗೆ ಸಿನಿರಸಿಕರು ಫಿದಾ ಆಗಿದ್ದಾರೆ.

ಗಳಿಕೆಯಲ್ಲಿ ಹೊಸ ದಾಖಲೆ ಬರೆದ ‘ಕರಾವಳಿ’

ವೀಕೆಂಡ್ ಲಾಭವನ್ನು ಸಂಪೂರ್ಣವಾಗಿ ಬಾಚಿಕೊಂಡಿರುವ ಈ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ಮೂರೇ ದಿನಗಳಲ್ಲಿ ಭಾರತಾದ್ಯಂತ ಬರೋಬ್ಬರಿ 3.88 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ 4 ಕೋಟಿ ಗಡಿಯತ್ತ ಧಾವಿಸುತ್ತಿದೆ.

ಅದ್ಭುತ ತಾರಾಗಣ, ಮೆಚ್ಚುಗೆಯ ಸುರಿಮಳೆ

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಮಿತ್ರ ಹಾಗೂ ರಮೇಶ್ ಇಂದಿರಾ ಅವರ ನಟನೆ ಚಿತ್ರದ ಜೀವಾಳವಾಗಿದೆ. ಪ್ರತಿಯೊಂದು ಪಾತ್ರಕ್ಕೂ ಸಿನಿಗೋಯಿಂಗ್ಸ್ ಜೈಕಾರ ಹಾಕುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಗಳಿಕೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !