Saturday, January 10, 2026

CINE | ‘ಟಾಕ್ಸಿಕ್’ ಟೀಸರ್‌ನ ಮಿಸ್ಟರಿ ಹುಡುಗಿ ನಟಾಲಿಯಾ ಬರ್ನ್ ಅಲ್ಲ..! ಮತ್ತಿನ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಟೀಸರ್‌ನಲ್ಲಿ ಯಶ್ ಅವರನ್ನು ‘ರಾಯ’ ಎಂಬ ಪಾತ್ರದಲ್ಲಿ ಪರಿಚಯಿಸಲಾಗಿದ್ದು, ರಗಡ್ ಲುಕ್ ಮತ್ತು ಹಿಂಸಾತ್ಮಕ ಆಕ್ಷನ್ ದೃಶ್ಯಗಳು ಗಮನ ಸೆಳೆದಿವೆ.

ಆದರೆ ಟೀಸರ್‌ನಲ್ಲಿನ ಒಂದು ವಿಶೇಷ ದೃಶ್ಯ ಎಲ್ಲರ ಕುತೂಹಲ ಹೆಚ್ಚಿಸಿದೆ. ಸ್ಮಶಾನ ಹಿನ್ನೆಲೆಯಲ್ಲಿರುವ ಕಾರಿನೊಳಗೆ ಯಶ್ ಜೊತೆ ಕಾಣಿಸಿಕೊಂಡ ಮಿಸ್ಟರಿ ನಟಿ ಯಾರು ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಮೊದಲಿಗೆ ಹಾಲಿವುಡ್ ನಟಿ ನಟಾಲಿ ಬರ್ನ್ ಎನ್ನಲಾಗಿತ್ತು. ಇದೀಗ ಆ ಗೊಂದಲಕ್ಕೆ ಸ್ವತಃ ನಿರ್ದೇಶಕಿ ಗೀತು ಮೋಹನ್‌ದಾಸ್ ತೆರೆ ಎಳೆದಿದ್ದಾರೆ. ಆ ದೃಶ್ಯದಲ್ಲಿರುವುದು ಬೀಟ್ರಿಜ್ ಬಾಚ್ ಎಂದು ಅವರು ಸ್ಪಷ್ಟಪಡಿಸಿದ್ದು, “ಇವಳು ನನ್ನ ಸ್ಮಶಾನದ ಹುಡುಗಿ” ಎಂದು ಫೋಟೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: FOOD | ಬಿಸಿಬಿಸಿಯಾದ ಮೂಂಗ್‌ದಾಲ್ ನಗ್ಗೆಟ್ಸ್! ಸಂಜೆ ಟೀ ಜೊತೆ ಪರ್ಫೆಕ್ಟ್ ಆಗಿರುತ್ತೆ

ಟೀಸರ್‌ನ ರೊಮ್ಯಾಂಟಿಕ್ ಟಚ್ ಹಾಗೂ ಡಾರ್ಕ್ ಥೀಮ್ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಯಶ್ ಅವರ ಶಿಸ್ತು, ಬದ್ಧತೆಯನ್ನು ಗೀತು ಮೋಹನ್‌ದಾಸ್ ಬಹಿರಂಗವಾಗಿ ಹೊಗಳಿದ್ದಾರೆ. ಸ್ಟಾರ್ ಕಲಾವಿದರ ದಂಡೇ ಇರುವ ‘ಟಾಕ್ಸಿಕ್’ ಸಿನಿಮಾ 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

error: Content is protected !!