April 13, 2026
Monday, April 13, 2026
spot_img

CINE | ಬೋಲ್ಡ್ ಅವತಾರದಲ್ಲಿ ‘ನ್ಯಾಷನಲ್ ಕ್ರಶ್’: ರಶ್ಮಿಕಾ-ಕೃತಿ ಕಾಂಬಿನೇಷನ್‌ನಲ್ಲಿ ಸೆನ್ಸೇಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ತನ್ನ ಮುಗ್ಧ ನಗು ಮತ್ತು ನಟನೆಯಿಂದ ಮನೆಮಾತಾಗಿರುವ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ, ಈಗ ಅಭಿಮಾನಿಗಳಿಗೆ ಶಾಕ್ ನೀಡಲು ಸಜ್ಜಾಗಿದ್ದಾರೆ. ಮೊದಮೊದಲು ಸಾಫ್ಟ್ ಪಾತ್ರಗಳಲ್ಲಿ ಮಿಂಚುತ್ತಿದ್ದ ರಶ್ಮಿಕಾ, ಈಗ ವೃತ್ತಿಜೀವನದ ಅತ್ಯಂತ ಸವಾಲಿನ ಹಾಗೂ ಬೋಲ್ಡ್ ಪಾತ್ರಕ್ಕೆ ಕೈಹಾಕಿದ್ದಾರೆ.

2012ರಲ್ಲಿ ದೀಪಿಕಾ ಪಡುಕೋಣೆ ಮತ್ತು ಸೈಫ್ ಅಲಿ ಖಾನ್ ನಟನೆಯಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ‘ಕಾಕ್‌ಟೇಲ್’ ಚಿತ್ರದ ಸೀಕ್ವೆಲ್ ಈಗ ಸದ್ದು ಮಾಡುತ್ತಿದೆ. ಆದರೆ, ಈ ಬಾರಿ ಕಥೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಮೂಲ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆ ಇತ್ತಾದರೆ, ‘ಕಾಕ್‌ಟೇಲ್ 2’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ಲೆಸ್ಬಿಯನ್ ಕಪಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಸಂಚಲನ ಮೂಡಿಸಿದೆ.

ಈ ಚಿತ್ರದಲ್ಲಿ ಶಾಹಿದ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿದ್ದರೂ, ರಶ್ಮಿಕಾ ಮತ್ತು ಕೃತಿ ನಡುವಿನ ಕೆಮಿಸ್ಟ್ರಿ ಮತ್ತು ಹಾಟ್ ದೃಶ್ಯಗಳು ಚಿತ್ರದ ಪ್ರಮುಖ ಆಕರ್ಷಣೆ ಎನ್ನಲಾಗುತ್ತಿದೆ.

ನಿರ್ದೇಶಕ ಹೋಮಿ ಅದ್ಜಾನಿಯಾ ಈಗಾಗಲೇ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಶಾಹಿದ್ ಕಪೂರ್ ಅವರ ‘ಓ ರೋಮಿಯೊ’ ಚಿತ್ರದ ಬಿಡುಗಡೆಯ ಕಾರಣದಿಂದಾಗಿ ಈ ಸಿನಿಮಾವನ್ನು ತುಸು ಮುಂದೂಡಲಾಗಿತ್ತು. ಮೂಲಗಳ ಪ್ರಕಾರ, ಮುಂದಿನ ತಿಂಗಳು ಈ ಬಹುನಿರೀಕ್ಷಿತ ಚಿತ್ರ ಬೆಳ್ಳಿತೆರೆಯ ಮೇಲೆ ಅಪ್ಪಳಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !