CINE | ‘ಒಡೆಲಾ 2’ ರಿಲೀಸ್‌ ಡೇಟ್‌ ರಿವೀಲ್, ಡಿಫ್ಫ್ರೆಂಟ್ ಲುಕ್ ನಲ್ಲಿ ಮಿಲ್ಕಿ ಬ್ಯೂಟಿ ಮಿಚಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐಟಂ ಸಾಂಗ್ ಹಾಗೂ ಬೋಲ್ಡ್ ಪಾತ್ರಗಳಲ್ಲಿ ಮಿಂಚುತ್ತಿದ್ದ ಟಾಲಿವುಡ್ ನ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇದೀಗ ಸಾದ್ವಿ ಲುಕ್ ನಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ.

ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಒಡೆಲಾ 2 ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಏಪ್ರಿಲ್ 17, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ. ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆ ಗೊಂಡಿದ್ದು, ತಮನ್ನಾ ಭಾಟಿಯಾ ರಕ್ತದಲ್ಲಿ ತೊಯ್ದಿರುವುದನ್ನು ಕಾಣಬಹುದು. ಚಿತ್ರದ ಮೊದಲ ಪೋಸ್ಟರ್ ನಲ್ಲಿ ತಮನ್ನಾ ನಾಗ ಸಾಧು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸೌಂದರ್ ರಾಜನ್ ಎಸ್ ಛಾಯಾಗ್ರಾಹಕರಾಗಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಮೇಲ್ವಿಚಾರಣೆಯ ಕ್ರೆಡಿಟ್ ಅನ್ನು ಸಂಪತ್ ವಹಿಸಿಕೊಂಡಿದ್ದಾರೆ.

ಈ ಸಿನೆಮಾದಲ್ಲಿ ಯುವ, ನಾಗ ಮಹೇಶ್, ವಂಶಿ, ಗಗನ್ ವಿಹಾರಿ, ಸುರೇಂದರ್ ರೆಡ್ಡಿ, ಭೂಪಾಲ್ ಮತ್ತು ಪೂಜಾ ರೆಡ್ಡಿ ಜೊತೆಗೆ ಹೆಬ್ಬಾ ಪಟೇಲ್ ಮತ್ತು ವಸಿಷ್ಟ ಎನ್ ಸಿಂಹ ಕೂಡ ಅಭಿನಯಿಸಿದ್ದಾರೆ.

 

View this post on Instagram

 

A post shared by Tamannaah Bhatia (@tamannaahspeaks)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!