ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ತಮಿಳಿನಲ್ಲಿ ಬಿಡುಗಡೆಯಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಪರಂತು ಪೋ’ ಸಿನಿಮಾ, ಇದೀಗ ಓಟಿಟಿಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಜುಲೈ 4ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಂಗೀತಾತ್ಮಕ ಹಾಸ್ಯ ಚಿತ್ರವನ್ನು ಆಗಸ್ಟ್ 5ರಿಂದ ಜಿಯೋಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಆಗಲಿದೆ. ಜಿಯೋಹಾಟ್ಸ್ಟಾರ್ ಒಟಿಟಿಪ್ಲೇ ಪ್ರೀಮಿಯಂ ಚಂದಾದಾರಿಕೆಯಿಂದ ಈ ಚಿತ್ರವನ್ನು ತಮಿಳು, ತೆಲುಗು, ಹಿಂದಿ, ಕನ್ನಡ, ಮಲಯಾಳಂ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ವೀಕ್ಷಿಸಬಹುದು.
‘ಪರಂತು ಪೋ’ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ರಾಮ್ ಬರೆದು ನಿರ್ದೇಶಿಸಿದ್ದಾರೆ. ತಾರಾಮಣಿ, ತಂಗಾ ಮೀಂಕಲ್ ಹಾಗೂ ಪೆರಾನ್ಬು ಮುಂತಾದ ಭಾವನಾತ್ಮಕ ಚಿತ್ರಗಳ ಮೂಲಕ ಜನಪ್ರಿಯರಾದ ರಾಮ್ ಈ ಬಾರಿ ಹಾಸ್ಯ ಸ್ಫೂರ್ತಿಯಿಂದ ಕೂಡಿದ ಹೃದಯಸ್ಪರ್ಶಿ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಶಿವ, ಗ್ರೇಸ್ ಆಂಟನಿ, ಮಾಸ್ಟರ್ ಮಿಥುನ್ ರಯಾನ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಕಥಾಹಂದರ ಒಂದು ತಂದೆ ಮತ್ತು ಅವನ ಚಿಕ್ಕ ಮಗನ ಅನಿರೀಕ್ಷಿತ ಪ್ರವಾಸದ ಹಿಂದೆ ಸಾಗುತ್ತದೆ. ಜನದಟ್ಟಣೆಯಿಂದ ದೂರದ ಪ್ರದೇಶಗಳಲ್ಲಿ ನಡೆಯುವ ಈ ಪ್ರವಾಸದಲ್ಲಿ, ಅವರು ಬದಲಾವಣೆಯೊಂದಿಗೆ ಬದುಕನ್ನು ನೋಡುವ ಹೊಸ ದೃಷ್ಟಿಕೋನ ಗಳಿಸುತ್ತಾರೆ.
ಗ್ರೇಸ್ ಆಂಟನಿ ಮತ್ತು ಅಜು ವರ್ಗೀಸ್ ಅವರ ತಮಿಳು ಚೊಚ್ಚಲ ಚಿತ್ರದ ಪಯಣವಾಗಿದ್ದರೂ, ಚಿತ್ರದಲ್ಲಿ ಶಿವ, ಅಂಜಲಿ, ವಿಜಯ್ ಯೇಸುದಾಸ್, ಮಿಥುನ್ ರಯಾನ್ ಮೊದಲಾದವರ ಅಭಿನಯ ಗಮನ ಸೆಳೆಯುತ್ತದೆ. ಚಿತ್ರಕ್ಕೆ ಸಂತೋಷ್ ಧಯಾನಿಥಿ ಸಂಗೀತ ನೀಡಿದ್ದಾರೆ. ಎನ್ ಕೆ ಏಕಾಂಬ್ರಂ ಛಾಯಾಗ್ರಾಹಣ ಮಾಡಿದ್ದಾರೆ.