CINE |ಅಂಡರ್‌ವರ್ಲ್ಡ್ ಡಾನ್ ಗೆಟಪ್ ನಲ್ಲಿ ಪವನ್ ಕಲ್ಯಾಣ್: ‘OG’ ರಕ್ತಸಿಕ್ತ ಲುಕ್ ರಿವೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ‘OG’ ಚಿತ್ರದ ಚಿತ್ರೀಕರಣದಲ್ಲಿ ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಘೋಷಿಸಿದೆ. ಯುವ ನಿರ್ದೇಶಕ ಸುಜಿತ್ ನಿರ್ದೇಶನ ಮಾಡಿರುವ ಈ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಡಿವಿವಿ ದಾನಯ್ಯ ನಿರ್ಮಿಸುತ್ತಿದ್ದಾರೆ. ಚಿತ್ರವು ಸೆಪ್ಟೆಂಬರ್ 25, 2025 ರಂದು ಬಿಡುಗಡೆಯಾಗಲಿದೆ.

ಪವನ್ ಕಲ್ಯಾಣ್ ಈ ಚಿತ್ರದಲ್ಲಿ ‘ಓಜಸ್ ಗಂಭೀರ’ ಎಂಬ ಮುಂಬೈ ಡಾನ್ ಪಾತ್ರದಲ್ಲಿ ನಟಿಸುತ್ತಿದ್ದು, ಇದು ಹತ್ತು ವರ್ಷಗಳ ಬಳಿಕದ ಅವರ ಹಿಂದಿರುಗುವ ಕಥೆ. ಇಮ್ರಾನ್ ಹಶ್ಮಿ ಖಳನಾಯಕನಾಗಿ ನಟಿಸುತ್ತಿದ್ದು, ಇದು ಅವರ ಮೊದಲ ತೆಲುಗು ಸಿನಿಮಾ.

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ “ಪ್ಯಾಕಪ್ ಫಾರ್ ಗಂಭೀರ.. ಗೇರಪ್ ಫಾರ್ ದಿ ರಿಲೀಸ್” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ ಪವನ್ ಕಲ್ಯಾಣ್ ರಕ್ತಸಿಕ್ತ ಕೈಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

ಪ್ರಿಯಾಂಕಾ ಮೋಹನ್ ನಾಯಕಿಯಾಗಿ, ಅರ್ಜುನ್ ದಾಸ್, ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಥಮನ್ ಎಸ್ ಸಂಗೀತ, ರವಿ ಕೆ. ಚಂದ್ರನ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನ ನಿರ್ವಹಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!