CINE | Pawan Kalyan Movie: ‘ಹರಿ ಹರ ವೀರಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಹರಿ ಹರ ವೀರಮಲ್ಲು’ ಇದೀಗ ಬಿಡುಗಡೆಗೆ ರೆಡಿ ಆಗಿದೆ. 2025ರ ಜುಲೈ 24 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ ಎಂದು ಚಿತ್ರ ತಂಡ ಘೋಷಿಸಿದೆ.

ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಯೋಧ ಹರಿ ಹರ ವೀರಮಲ್ಲು ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ 300 ವರ್ಷಗಳ ಹಿಂದೆ ನಡೆದ ಘಟನೆಯ ಆಧಾರದ ಮೇಲೆ ಈ ಸಿನಿಮಾ ರೆಡಿ ಆಗಿದೆ.

ಜ್ಯೋತಿ ಕೃಷ್ಣ ಹಾಗೂ ಕ್ರಿಶ್ ಜಗರ್ಲಮುಡಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪವನ್ ಜೊತೆ ಬಾಲಿವುಡ್‌ನ ಬಾಬಿ ಡಿಯೋಲ್, ನಿಧಿ ಅಗರ್‌ವಾಲ್, ನರ್ಗಿಸ್ ಫಕ್ರಿ ಮತ್ತು ಶುಭಲೇಖ ಸುಧಾಕರ್ ಪಾತ್ರ ನಿರ್ವಹಿಸಿದ್ದು. ಸಂಗೀತ ನಿರ್ದೇಶನದ ಹೊಣೆಗಾರಿಕೆ ಎಂ.ಎಂ. ಕೀರವಾಣಿಯವರದ್ದು. ಚಿತ್ರಕ್ಕೆ ಮನೋಜ್ ಪರಮಹಂಸ ಕ್ಯಾಮೆರಾವರ್ಕ್ ಮಾಡಿದ್ದಾರೆ. ‘ಹರಿ ಹರ ವೀರಮಲ್ಲು’ ಎಲ್ಲ ಪ್ರಮುಖ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!