Saturday, December 20, 2025

CINE | ‘ಡೆವಿಲ್’ ಅಬ್ಬರಕ್ಕೆ ಬ್ರೇಕ್ ಹಾಕಿದ ಪೈರಸಿ: ಶೋಗಳ ಸಂಖ್ಯೆ ಇಳಿಕೆ, ಚಿತ್ರಕ್ಕೆ ಈಗ ಒಟಿಟಿಯೇ ಆಸರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ವೇಗವನ್ನು ಕಳೆದುಕೊಳ್ಳುತ್ತಿದೆ. ಆರಂಭದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಈ ಚಿತ್ರ, ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಶೋಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಇದು ಚಿತ್ರದ ಗಳಿಕೆಯ ಮೇಲೆ ನೇರ ಪರಿಣಾಮ ಬೀರಿದ್ದು, ಚಿತ್ರತಂಡಕ್ಕೆ ಈಗ ಪೈರಸಿ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸದ್ಯದ ಲೆಕ್ಕಾಚಾರದ ಪ್ರಕಾರ ‘ಡೆವಿಲ್’ ಸಿನಿಮಾದ ಒಟ್ಟು ಗಳಿಕೆ 25.58 ಕೋಟಿ ರೂಪಾಯಿ ತಲುಪಿದೆ. ವಾರದ ದಿನಗಳಲ್ಲಿ ಲಕ್ಷಗಳಲ್ಲಿ ಮಾತ್ರ ಕಲೆಕ್ಷನ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಡಿಸೆಂಬರ್ 18: ಅಂದಾಜು 55-60 ಲಕ್ಷ ರೂ.

ಡಿಸೆಂಬರ್ 19: 47 ಲಕ್ಷ ರೂ.

ಡಿಸೆಂಬರ್ 20 (ಇಂದು): 26 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ.

ಮುಂದಿನ ವಾರ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಹಾಗೂ ಮಲ್ಟಿ ಸ್ಟಾರರ್ ಸಿನಿಮಾ ‘45’ ತೆರೆಕಾಣುತ್ತಿವೆ. ಈ ದೊಡ್ಡ ಚಿತ್ರಗಳ ಅಬ್ಬರ ಶುರುವಾದರೆ ‘ಡೆವಿಲ್’ ಸಿನಿಮಾಗೆ ಸಿಗುವ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಕುಸಿಯುವುದು ಖಚಿತ. ಹೀಗಾಗಿ ಚಿತ್ರಮಂದಿರಗಳಲ್ಲಿ ಸುದೀರ್ಘ ಕಾಲ ಓಡುವುದು ಕಷ್ಟ ಎನ್ನಲಾಗುತ್ತಿದೆ.

ನಷ್ಟದಿಂದ ತಪ್ಪಿಸಿಕೊಳ್ಳಲು ನಿರ್ಮಾಪಕರಿಗೆ ಈಗ ‘ಒಟಿಟಿ ರಿಲೀಸ್’ ಎನ್ನುವ ಆಯ್ಕೆ ಎದುರಿಗಿದೆ. ಒಟಿಟಿ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ನಿಗದಿತ ಸಮಯಕ್ಕಿಂತ ಮೊದಲೇ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದರೆ ಉತ್ತಮ ಹಣ ಸಿಗುವ ಸಾಧ್ಯತೆ ಇದೆ. ಈ ಹಿಂದೆ ಹಲವು ಸಿನಿಮಾಗಳು ಇದೇ ಹಾದಿ ಹಿಡಿದು ಸೇಫ್ ಆಗಿವೆ. ‘ಡೆವಿಲ್’ ಕೂಡ ಇದೇ ತಂತ್ರ ಅನುಸರಿಸುತ್ತಾ ಎಂಬುದು ಅಭಿಮಾನಿಗಳ ಕುತೂಹಲ.

error: Content is protected !!