ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪ್ರಭಾಸ್ ಸಿಕ್ಕ ಸಿಕ್ಕವರಿಗೆಲ್ಲ ಡೇಟ್ಸ್ ಕೊಡುವುದಿಲ್ಲ. ಪ್ರಭಾಸ್ಗೆ ಸಿನಿಮಾದ ಕತೆ, ತಮ್ಮ ಪಾತ್ರದ ಜೊತೆಗೆ ಯಾವ ಬ್ಯಾನರ್ಗಾಗಿ ಕೆಲಸ ಮಾಡುತ್ತಿದ್ದೀನಿ ಎಂಬುದು ಸಹ ಅಷ್ಟೆ ಮುಖ್ಯ. ಅಳೆದು ತೂಗಿ ನಿರ್ಮಾಪಕರನ್ನು ಆಯ್ಕೆ ಮಾಡುವ ಪ್ರಭಾಸ್, ಹೊಂಬಾಳೆ ಜೊತೆಗೆ ಒಂದೇ ಬಾರಿಗೆ ಮೂರು ಸಿನಿಮಾಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.
ನಟ ಪ್ರಭಾಸ್, ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆಯೊಟ್ಟಿಗೆ ಬರೋಬ್ಬರಿ ಮೂರು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಮೂರು ಸಿನಿಮಾ ಮುಂದಿನ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಬಿಡುಗಡೆ ಆಗಲಿದೆ. ತಾವು ಏಕೆ ಹೊಂಬಾಳೆ ಜೊತೆಗೆ ಮೂರು ಸಿನಿಮಾ ಒಟ್ಟಿಗೆ ಸಹಿ ಮಾಡಿದೆ ಎಂದು ಸ್ವತಃ ಪ್ರಭಾಸ್ ಹೇಳಿಕೊಂಡಿದ್ದಾರೆ.
‘ವಿಜಯ್ ಕಿರಗಂದೂರು, ತಮ್ಮ ಸಿನಿಮಾಕ್ಕೆ ಕೆಲಸ ಮಾಡುವ ಜನರನ್ನು ನೋಡಿಕೊಳ್ಳುವ ರೀತಿ, ಕೇರ್ ಮಾಡುವ ರೀತಿಗೆ ನಾನು ಮಾರು ಹೋದೆ. ಅವರೂ ಸಹ ನನ್ನಂತೆಯೇ. ತಮ್ಮ ಬಾಲ್ಯದ ಗೆಳೆಯರನ್ನು ಸದಾ ಹತ್ತಿರ ಇಟ್ಟುಕೊಂಡಿರುತ್ತಾರೆ. ಹೆಚ್ಚಿನ ಸಮಯ ಮನೆಯಲ್ಲೇ ಇರುತ್ತಾರೆ. ಹೊರಗೆ ಹೋಗುವುದು ಇಷ್ಟಪಡುವುದಿಲ್ಲ’ ಎಂದು ಪ್ರಭಾಸ್ ಹೇಳಿದ್ದಾರೆ.