ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾ ಸಿನಿಮಾಗಳಿಗೆ 1000 ಕೋಟಿ ಕಲೆಕ್ಷನ್ ಎಂಬುದು ಅನಾಯಾಸ ಆಗಿಬಿಟ್ಟಿದೆ. ಆದರೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಈ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ 1000 ಕೋಟಿ ಗಳಿಕೆ ದಾಟಿದೆ.
ಸಿನಿಮಾದ ಡಿಜಿಟಲ್, ಸ್ಯಾಟಲೈಟ್, ಮ್ಯೂಸಿಕ್ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಅಲ್ಲದೆ ಸಿನಿಮಾದ ಬಿಡುಗಡೆ ಹಕ್ಕುಗಳನ್ನು ಸಹ ಈಗಾಗಲೇ ಮಾರಾಟ ಮಾಡಲಾಗಿದ್ದು, ಸಿನಿಮಾ ಬಿಡುಗಡೆಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಇರುವಾಗಲೇ ಸಿನಿಮಾ ಭಾರಿ ಮೊತ್ತ ಗಳಿಕೆ ಮಾಡಿದೆ.
‘ಪುಷ್ಪ 2’ ಸಿನಿಮಾದ ಡಿಜಿಟಲ್ ಅಥವಾ ಒಟಿಟಿ ಹಕ್ಕು ನೆಟ್ಫ್ಲಿಕ್ಸ್ಗೆ ಮಾರಾಟವಾಗಿದ್ದು, 270 ಕೋಟಿ ರೂಪಾಯಿಗಳನ್ನು ನೀಡಿ ನೆಟ್ಫ್ಲಿಕ್ಸ್, ‘ಪುಷ್ಪ 2’ ಸಿನಿಮಾ ಖರೀದಿ ಮಾಡಿದೆ. ಸಿನಿಮಾದ ಸ್ಯಾಟಲೈಟ್ ಹಕ್ಕು ಸುಮಾರು 100 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಸುಮಾರು 450 ಕೋಟಿ ರೂಪಾಯಿ ಹಣ ರಿಲೀಸ್ ಗೂ ಮುನ್ನವೇ ಗಳಿಕೆ ಆಗಿದೆ.