July 18, 2026
Saturday, July 18, 2026
spot_img

CINE | ಅಟ್ಲಿ ಸಿನಿಮಾದಲ್ಲಿ ‘ಪುಷ್ಪ’ ಜೋಡಿ ಧಮಾಕಾ: ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿ ಮತ್ತೆ ಕಂಬ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಪುಷ್ಪ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಜೋಡಿ ಮತ್ತೆ ಬೆಳ್ಳಿಪರದೆ ಮೇಲೆ ಒಂದಾಗುತ್ತಿದೆ. ಆದರೆ, ಈ ಬಾರಿ ಇವರು ಪುಷ್ಪರಾಜ್-ಶ್ರೀವಲ್ಲಿಯಾಗಿ ಕಾಣಿಸಿಕೊಳ್ಳುತ್ತಿಲ್ಲ! ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನದ, ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ರಾಕಾ’ದಲ್ಲಿ ರಶ್ಮಿಕಾ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

700 ಕೋಟಿ ಬಜೆಟ್, ಮಲ್ಟಿಸ್ಟಾರರ್ ಸಿನಿಮಾ

ಬೃಹತ್ ಕ್ಯಾನ್ವಾಸ್‌ನಲ್ಲಿ ಮೂಡಿಬರುತ್ತಿರುವ ‘ರಾಕಾ’ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮುಖ್ಯ ನಾಯಕಿಯಾಗಿದ್ದು, ಇವರೊಂದಿಗೆ ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್ ಹಾಗೂ ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಅಷ್ಟೇ ಅಲ್ಲದೆ, ಕಿಂಗ್ ಖಾನ್ ಶಾರುಖ್ ಖಾನ್ ಕೂಡ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಗಾಂಧಿನಗರದಲ್ಲಿ ದಟ್ಟವಾಗಿದೆ.

ಶೂಟಿಂಗ್ ಮತ್ತು ರಿಲೀಸ್ ಅಪ್ಡೇಟ್

ಇತ್ತೀಚೆಗೆ ಅಲ್ಲು ಅರ್ಜುನ್ ಜನ್ಮದಿನದಂದು ಬಿಡುಗಡೆಯಾದ ‘ರಾಕಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಬಿಗ್ ಬಜೆಟ್ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಮುಂಬೈನ ಅದ್ದೂರಿ ಸೆಟ್‌ಗಳಲ್ಲಿ ಆರಂಭವಾಗಲಿದ್ದು, 2026ರ ಅಂತ್ಯದ ವೇಳೆಗೆ ಶೂಟಿಂಗ್ ಪೂರ್ಣಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ 2027 ರಲ್ಲಿ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ತಾರಾಗಣದ ಸುದ್ದಿ ಭಾರಿ ಟ್ರೆಂಡ್ ಸೃಷ್ಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !