February 14, 2026
Saturday, February 14, 2026
spot_img

CINE | 35 ವರ್ಷಗಳ ಬಳಿಕ ಒಂದಾದ ರಜನಿಕಾಂತ್–ಕಮಲ್: ಮೆಗಾ ಪ್ರಾಜೆಕ್ಟ್ ಗೆ ರೆಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಎರಡು ಮಹಾನ್ ನಟರು ಮತ್ತೆ ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿರುವ ಸುದ್ದಿ ಸಿನಿ ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿದೆ. ಸುಮಾರು ಮೂರು ದಶಕಗಳ ಬಳಿಕ ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ನಿರ್ಮಿಸುತ್ತಿದ್ದು, ಅವರು ತಾವೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೆಗಾ ಸಿನಿಮಾಕ್ಕಾಗಿ ರಜನಿಕಾಂತ್ ಅವರಿಗೆ ಸುಮಾರು 225 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಈ ಜೋಡಿ ಗಿರಫ್ತಾರ್ ಸಿನಿಮಾದಲ್ಲಿ ಕೊನೆಯದಾಗಿ ಒಂದಾಗಿ ನಟಿಸಿದ್ದರು.

ಇದನ್ನೂ ಓದಿ:

ಸದ್ಯ ರಜನಿಕಾಂತ್ ಜೈಲರ್ 2 ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಕಮಲ್ ಹಾಸನ್ ಕಲ್ಕಿ 2898 ಎಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರಿಗೂ ಸಮಾನ ಮಹತ್ವ ಇರುವ ಕಥೆ ಸಿದ್ಧವಾಗುತ್ತಿದ್ದು, ಟೈಟಲ್ ಪ್ರೋಮೊ ಚಿತ್ರೀಕರಣ ಶೀಘ್ರದಲ್ಲೇ ನಡೆಯಲಿದೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !