ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕೂಲಿ’ ಈಗಾಗಲೇ ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ಕಥೆ ಗೋಲ್ಡ್ ಸ್ಮಗ್ಲಿಂಗ್ ಹಿನ್ನಲೆಯಲ್ಲಿ ಸಾಗುತ್ತದೆ ಎಂಬ ಮಾಹಿತಿ ಲೀಕ್ ಆಗಿರುವ ಬೆನ್ನಲ್ಲೇ, ಈ ಸಿನಿಮಾದ ಓಟಿಟಿ ಬಿಡುಗಡೆ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ.
‘ಕೂಲಿ’ ಸಿನಿಮಾ ಆಗಸ್ಟ್ 14 ರಂದು ಭರ್ಜರಿ ರೀತಿ ಬಿಡುಗಡೆಯಾಗಲಿದೆ. ಆದರೆ ಈ ಸಿನಿಮಾ ಓಟಿಟಿಗೆ ಬರೋದು ಸಿನಿಮಾ ಬಿಡುಗಡೆಯಾದ ನಂತರ ಎಂಟು ವಾರಗಳ ನಂತರ ಎಂಬ ನಿರ್ಧಾರ ನಿರ್ಮಾಪಕರಿಂದ ಆಗಿರುವ ಮಾಹಿತಿ ಲಭ್ಯವಾಗಿದೆ. ಈ ಒಪ್ಪಂದ ಪ್ರಕಾರ, ಚಿತ್ರ ಬಿಡುಗಡೆಯ ನಂತರವೇ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಪ್ರೈಮ್ ವಿಡಿಯೋ ಜೊತೆ ಒಪ್ಪಂದ
‘ಕೂಲಿ’ ಚಿತ್ರಕ್ಕೆ ಪ್ರೈಮ್ ವಿಡಿಯೋ ಓಟಿಟಿ ಹಕ್ಕು ಪಡೆದಿದ್ದು, ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ಮಧ್ಯಭಾಗದ ವೇಳೆಗೆ ಸಿನಿಮಾ ಡಿಜಿಟಲ್ ಪ್ರೇಕ್ಷಕರ ಮುಂದೆ ಬರಲಿದೆ. ಇದರಿಂದಾಗಿ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯೂ ಇದೆ.
ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಈ ಬಾರಿ ನಿರ್ದೇಶಕ ಲೋಕೇಶ್ ಕನಕರಾಜ್ ಕೆಲಸ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಅವರ ಕಾಂಬೋನಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ. ಚಿತ್ರದ ತಾರಾಬಳಗದಲ್ಲಿರುವವರಲ್ಲಿ ಬಾಲಿವುಡ್‌ನ ಆಮೀರ್ ಖಾನ್, ಟಾಲಿವುಡ್‌ನ ನಾಗಾರ್ಜುನ್, ಸ್ಯಾಂಡಲ್‌ವುಡ್‌ನ ಉಪೇಂದ್ರ, ಶೃತಿ ಹಾಸನ್, ಪೂಜಾ ಹೆಗಡೆ, ಸತ್ಯರಾಜ್ ಇದ್ದಾರೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ಚಂದ್ರು ಅನ್ಬಳಗನ್ ಜೊತೆಗೂಡಿ ಕಥೆ ರಚನೆ ಮಾಡಲಾಗಿದೆ. ಗಿರೀಶ್ ಗಂಗಾಧರ್ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ.