July 18, 2026
Saturday, July 18, 2026
spot_img

CINE | ‘ಪೆದ್ದಿ’ ಗೆಲುವಿನ ಬೆನ್ನಲ್ಲೇ ಮಗಳು ಕ್ಲಿನ್ ಕಾರಾ ಬಗ್ಗೆ ಶಾಕಿಂಗ್ ವಿಷಯ ಬಿಚ್ಚಿಟ್ಟ ರಾಮ್ ಚರಣ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಗ್ರಾಮೀಣ ಭಾಗದ ಕ್ರೀಡಾಪಟುವಿನ ಕಥೆ ಹೊಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಜೈ ಎಂದಿದ್ದು, ಈಗಾಗಲೇ ವಿಶ್ವದಾದ್ಯಂತ 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಭರ್ಜರಿ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗಷ್ಟೇ ಅದ್ಧೂರಿ ‘ಸಕ್ಸಸ್ ಇವೆಂಟ್’ ಹಮ್ಮಿಕೊಂಡಿತ್ತು.

‘ನನ್ನನ್ನು ಮರೆತು ಬಿಡ್ತಾರೆ ಅನ್ನೋ ಭಯವಿದೆ’ ಎಂದ ಚರಣ್!

ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಚರಣ್, “ಈ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಅದ್ಭುತವಾಗಿದೆ. ಜನ ನನ್ನ ಅಸಲಿ ಹೆಸರನ್ನೇ ಮರೆತು, ಕೇವಲ ‘ಪೆದ್ದಿ’ ಅಂತಲೇ ನೆನಪಿಟ್ಟುಕೊಳ್ಳುತ್ತಾರೋ ಎಂಬ ಭಯ ಶುರುವಾಗಿದೆ” ಎಂದು ತಮಾಷೆಯಾಗಿ ಹೇಳಿದರು.

ಮಗಳು ಕ್ಲಿನ್ ಕಾರಾ ಬದಲಾದಳು!

ಇದೇ ವೇಳೆ ತಮ್ಮ ಮುದ್ದಿನ ಮಗಳು ಕ್ಲಿನ್ ಕಾರಾ ಬಗ್ಗೆ ಮಾತನಾಡಿದ ಅವರು, “ನನ್ನ ಮಗಳು ಈಗಷ್ಟೇ ಮಾತನಾಡಲು ಕಲಿಯುತ್ತಿದ್ದಾಳೆ. ಮೊದಲೆಲ್ಲ ನನ್ನನ್ನು ‘ಅಪ್ಪ’ ಎನ್ನುತ್ತಿದ್ದವಳು, ಸಿನಿಮಾ ರಿಲೀಸ್ ಆದಾಗಿನಿಂದ ‘ಪೆದ್ದಿ’ ಎಂದೇ ಕರೆಯುತ್ತಿದ್ದಾಳೆ! ನಂತರ ತಿಳಿಹೇಳಿದ ಮೇಲೆ ಈಗ ‘ಪೆದ್ದಿ ನಾನ್ನ’ (ಪೆದ್ದಿ ಅಪ್ಪ) ಎಂದು ಕರೆಯಲು ಶುರು ಮಾಡಿದ್ದಾಳೆ” ಎಂದು ಮನೆಯ ಮುದ್ದಾದ ಕಥೆಯನ್ನು ಹಂಚಿಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !