ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರ್ನಾಲ್ಕು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರೋ ರಶ್ಮಿಕಾ ಮಂದಣ್ಣ ಹಿಂದೆ ಒಂದು ಅವಕಾಶಕ್ಕಾಗಿ ತುಂಬಾನೇ ಪರದಾಡಿದ್ದರಂತೆ.
ಖಾಸಗಿ ಸಂದರ್ಶನದಲ್ಲಿ ರಶ್ಮಿಕಾ ತಮ್ಮ ಜೀವನದಲ್ಲಿ ಅಭಿನಯಕ್ಕಾಗಿ ಶ್ರಮ ಪಟ್ಟ ಬಗ್ಗೆ ಮಾತನಾಡಿದ್ದು, ನಾನು ಆಡಿಷನ್‌ಗಳಲ್ಲಿ ಹಲವು ಸಲ ರಿಜೆಕ್ಟ್ ಆಗಿದ್ದೀನಿ ಆ ಸಮಯದಲ್ಲಿ ಅಳುತ್ತಾ ಮನೆಗೆ ಬಂದಿದ್ದೆ. ಕೊನೆಗೂ ಒಂದು ಸಿನಿಮಾಗೆ ಆಯ್ಕೆ ಆದೆ. ಸುಮಾರು 2 ರಿಂದ 3 ತಿಂಗಳ ಕಾಲ ನನಗೆ ತರಬೇತಿ ನೀಡಿದ್ದರು. ತರಬೇತಿ ನೀಡಿದ ಮೇಲೆ ಸಿನಿಮಾ ಕ್ಯಾನ್ಸಲ್ ಮಾಡಿಬಿಟ್ಟರು ಎಂದು ಹೇಳಿದ್ದಾರೆ.
ಒಂದು ಸಿನಿಮಾದ ನಂತರ ಇನ್ನೊಂದು ಸಿನಿಮಾದಲ್ಲಿ ಚೆನ್ನಾಗಿ ನಟಿಸುವುದು ನಮ್ಮ ಕೈಯಲ್ಲಿ ಇರುತ್ತದೆ. ಈಗ ನನ್ನ ಸಿನಿಮಾಗಳನ್ನು ನಾನೇ ನೋಡಿದಾಗ ಇನ್ನೂ ಉತ್ತಮವಾಗಿ ನಟಿಸಬಹುದಿತ್ತು ಅನಿಸುತ್ತದೆ. ಹೀಗಾಗಿ ಪ್ರತಿ ಸಿನಿಮಾದಲ್ಲೂ ಬದಲಾವಣೆ ಮಾಡಿಕೊಳ್ಳುತ್ತೀನಿ ಎಂದು ರಶ್ಮಿಕಾ ಹೇಳಿದ್ದಾರೆ.