August 24, 2026
Monday, August 24, 2026
spot_img

CINE | ‘ರಾಯನ್’ ಸಿನಿಮಾ ರಾಷ್ಟ್ರ ಪ್ರಶಸ್ತಿ ವಿವಾದ: ಕೊನೆಗೂ ಮೌನ ಮುರಿದ ಧನುಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ಸಿನಿಮಾಗಳಿಗೆ ಸಿಕ್ಕ ರಾಷ್ಟ್ರ ಪ್ರಶಸ್ತಿ ಕುರಿತು ಎದ್ದಿರುವ ಚರ್ಚೆಗಳಿಗೆ ತಮಿಳು ನಟ ಧನುಷ್ ಅಂತಿಮವಾಗಿ ಉತ್ತರ ನೀಡಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಪ್ರಶಸ್ತಿಯನ್ನು ಪ್ರಾದೇಶಿಕ ನಟನೊಬ್ಬನ ಸಾಧನೆಯಾಗಿ ನೋಡಬೇಕೇ ಹೊರತು ವಿವಾದ ಮಾಡಬಾರದು ಎಂದು ವಿನಂತಿಸಿದ್ದಾರೆ.

ಒಂದೇ ವರ್ಷದಲ್ಲಿ ಎರಡು ದೊಡ್ಡ ಗೌರವ

2024ರಲ್ಲಿ ಧನುಷ್ ನಿರ್ದೇಶನದ ‘ರಾಯನ್’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಹಾಗೂ ‘ಕ್ಯಾಪ್ಟನ್ ಮಿಲ್ಲರ್’ ಅಭಿನಯಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ‘ಮಹಾರಾಜ’ ಮತ್ತು ‘ಮೆಯ್ಯಳಗನ್’ ಚಿತ್ರಗಳಿಗೆ ಈ ಗೌರವ ಸಿಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಟೀಕೆಗಳನ್ನು ಒಪ್ಪಿಕೊಂಡ ನಟ

ಈ ವಿಮರ್ಶೆಗಳನ್ನು ಸಹಜವಾಗಿಯೇ ಸ್ವೀಕರಿಸಿದ ಧನುಷ್, ‘ರಾಯನ್’ಗಿಂತ ಉತ್ತಮ ಸಿನಿಮಾಗಳು ಇದ್ದದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಹಳೆಯ ಸೂಪರ್ ಹಿಟ್ ಚಿತ್ರಗಳಾದ ‘ಪುದುಪೇಟ್ಟೈ’, ‘ವಡಾ ಚೆನ್ನೈ’, ‘ಕರ್ಣನ್’ ಮತ್ತು ‘ಮರಿಯನ್’ ಚಿತ್ರಗಳಿಗೆ ಪ್ರಶಸ್ತಿ ಸಿಗದೇ ಹೋದಾಗ ಯಾರೂ ಧ್ವನಿ ಎತ್ತಲಿಲ್ಲ ಎಂಬುದನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದರು.

ಅಭಿಮಾನಿಗಳಲ್ಲಿ ಧನುಷ್ ಮನವಿ

“ಕೆಲವೊಮ್ಮೆ ಸತತ ಶ್ರಮಕ್ಕೂ ಪ್ರಶಸ್ತಿ ಸಿಗುವುದಿಲ್ಲ, ಆದರೆ ಈ ಬಾರಿ ಅದೃಷ್ಟ ಜೊತೆಯಾಗಿದೆ. ನನ್ನ ಶ್ರಮ ಪ್ರಾಮಾಣಿಕವಾಗಿತ್ತು. ಒಬ್ಬ ತಮಿಳು ಕಲಾವಿದನಿಗೆ ಲಭಿಸಿದ ಈ ಗೌರವವನ್ನು ಎಲ್ಲರೂ ಒಂದಾಗಿ ಸಂಭ್ರಮಿಸೋಣ,” ಎಂದು ಧನುಷ್ ವಿನಂತಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !